New Delhi: ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ವ್ಯಾಪಾರ ಒಪ್ಪಂದ (India-US trade deal) ಚರ್ಚೆಯಲ್ಲಿ ಕೃಷಿ ಕ್ಷೇತ್ರ ಪ್ರಮುಖ ಅಡೆತಡೆಯಾಗಿದೆ. ಭಾರತದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರ ಜೀವನಕ್ಕೆ ಕೃಷಿಯೇ ಆಧಾರವಾಗಿರುವುದರಿಂದ, ವಿದೇಶೀ ಕೃಷಿ ಉತ್ಪನ್ನಗಳಿಂದ ಭಾರತೀಯ ರೈತರನ್ನು ರಕ್ಷಿಸಲು ಭಾರತ ಸುಂಕವನ್ನು ಹೆಚ್ಚು ವಸೂಲಿಸುತ್ತಿದೆ.
ಈಗ ಅಮೆರಿಕ, ತನ್ನ ಕೃಷಿ ಉತ್ಪನ್ನಗಳ ರಫ್ತುಗಳಿಗೆ ಭಾರತದಲ್ಲಿನ ಸುಂಕವನ್ನು ಶೇ. 40ರಿಂದ ಶೇ. 5ಕ್ಕೆ ಇಳಿಸಬೇಕೆಂದು ಒತ್ತಾಯಿಸುತ್ತಿದೆ. ಈ ಕುರಿತಾಗಿ ಸೋಮವಾರದಿಂದ ಗುರುವಾರದವರೆಗೆ ಎರಡೂ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸುತ್ತಿದ್ದಾರೆ.
ಅಮೆರಿಕದ ಹೇಳಿಕೆಯಲ್ಲಿ, ಭಾರತವು ಕೃಷಿ ಆಮದುಗಳಿಗೆ ಶೇ. 39ರಷ್ಟು ಟ್ಯಾರಿಫ್ ವಿಧಿಸುತ್ತಿದೆ, ಆದರೆ ಅಮೆರಿಕದಲ್ಲಿ ಭಾರತಕ್ಕೆ ಕೇವಲ ಶೇ. 3ರಷ್ಟೇ ಇದೆ. ಹೀಗಾಗಿ, ಎರಡೂ ದೇಶಗಳ ನಡುವೆ ಸಮಾನ ಅವಕಾಶಗಳು ಇರಬೇಕು ಎಂಬುದಾಗಿ ಅಮೆರಿಕ ಹೇಳುತ್ತಿದೆ.
ಅಮೆರಿಕದಲ್ಲಿ ಕೃಷಿ ದೊಡ್ಡ ಮಟ್ಟದಲ್ಲಿ, ಯಂತ್ರೋಪಕರಣಗಳ ಸಹಾಯದಿಂದ ನಡೆಯುತ್ತದೆ ಮತ್ತು ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಆದರೆ, ಭಾರತದಲ್ಲಿ ಸಣ್ಣ ಪುಟ್ಟ ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಸಾಗುವಳಿ ಮಾಡಿಕೊಂಡು ಹೋಗುತ್ತಿದ್ದಾರೆ. ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆಗೆ ಕೃಷಿಯೇ ಆಧಾರವಾಗಿದೆ. ಇದರಿಂದ ಬರುತ್ತಿರುವ ಆದಾಯವೂ ಅಷ್ಟಕಷ್ಟೇ. ಅಮೆರಿಕದ ಕಮರ್ಷಿಯಲ್ ಕೃಷಿಗೆ ಹೋಲಿಸಿದರೆ ಭಾರತದಲ್ಲಿ ಕೃಷಿ ಉತ್ಪನ್ನಶೀಲತೆ ಬಹಳ ಕಡಿಮೆ. ಹೀಗಾಗಿ, ಮುಕ್ತ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪನ್ನಗಳನ್ನು ಎದುರಿಸಲು ಭಾರತದ ರೈತರಿಗೆ ಸಾಧ್ಯವಾಗದೇ ಹೋಗಬಹುದು. ಹೀಗಾಗಿ, ಭಾರತವು ಡೈರಿ ಇತ್ಯಾದಿ ಕೃಷಿ ವಲಯವನ್ನು ರಕ್ಷಿಸಲು ಕಟಿಬದ್ಧವಾಗಿದೆ.
ಹೀಗಾಗಿ, ಭಾರತವು ಡೈರಿ ಸೇರಿದಂತೆ ಇತರ ಕೃಷಿ ವಲಯಗಳನ್ನು ರಕ್ಷಿಸಲು ಹೆಚ್ಚು ಸುಂಕವನ್ನೇ ಮುಂದುವರಿಸಬೇಕೆಂದು ಯೋಚಿಸುತ್ತಿದೆ.