back to top
26.3 C
Bengaluru
Friday, July 18, 2025
HomeBusinessಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಗೆ ಅನುಮೋದನೆ

ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಗೆ ಅನುಮೋದನೆ

- Advertisement -
- Advertisement -

New Delhi: 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಗೆ (Pradhan Mantri Dhan-Dhanya Krishi Yojana) ಇಂದು ಕೇಂದ್ರ ಸಚಿವ ಸಂಪುಟದಿಂದ ಹಸಿರು ನಿಶಾನೆ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶಗಳು

  • ಕೃಷಿ ಉತ್ಪಾದನೆ ಹೆಚ್ಚಿಸುವುದು
  • ಬೆಳೆಗಳಲ್ಲಿ ವೈವಿಧ್ಯತೆ ತರುವುದು
  • ಸುಸ್ಥಿರ ಕೃಷಿಗೆ ಉತ್ತೇಜನ ನೀಡುವುದು
  • ಸುಗ್ಗಿಯ ನಂತರ ಗೋದಾಮು ಮತ್ತು ಸಂಗ್ರಹಣೆ ಸುಧಾರಣೆ
  • ನೀರಾವರಿ ವ್ಯವಸ್ಥೆ ಉತ್ತಮಗೊಳಿಸಿ ಸಾಲ ಲಭ್ಯತೆ ಸುಲಭಗೊಳಿಸುವುದು

ಈ ಯೋಜನೆಯು 100 ಜಿಲ್ಲೆಗಳ 1.7 ಕೋಟಿ ರೈತರಿಗೆ ನೆರವಾಗಲಿದೆ. ಯೋಜನೆ ಜಾರಿಗೆ ವರ್ಷಕ್ಕೆ ₹24,000 ಕೋಟಿ ರೂಪಾಯಿ ಮಂಜೂರಾಗಿದ್ದು, ಕನಿಷ್ಠ 6 ವರ್ಷಗಳ ಕಾಲ ಈ ವೆಚ್ಚವನ್ನು ಭರಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ಯೋಜನೆವು ಈಗಾಗಲೇ ಕಾರ್ಯನ್ವಯವಾಗಿರುವ 36 ಯೋಜನೆಗಳು, ರಾಜ್ಯ ಯೋಜನೆಗಳು ಹಾಗೂ ಖಾಸಗಿ ವಲಯದ ಸಹಭಾಗಿತ್ವದೊಂದಿಗೆ ಜಾರಿಗೊಳ್ಳಲಿದೆ.

100 ಜಿಲ್ಲೆಗಳನ್ನು ಆಯ್ಕೆ ಮಾಡುವ ವಿಧಾನ

  • ಕಡಿಮೆ ಕೃಷಿ ಉತ್ಪಾದನೆ, ಕಡಿಮೆ ಇಳುವರಿ, ಕಡಿಮೆ ಹಣದ ಹರಿವು ಇರುವ ಜಿಲ್ಲೆಗಳ ಆಯ್ಕೆ
  • ಪ್ರತಿ ರಾಜ್ಯದಿಂದ ಕನಿಷ್ಠ 1 ಜಿಲ್ಲೆ ಆಯ್ಕೆ
  • ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ

ಪ್ರತಿ ಜಿಲ್ಲೆಯಲ್ಲಿ “ಧನ್-ಧಾನ್ಯ ಸಮಿತಿ” ರಚನೆಯಾಗಲಿದ್ದು, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಯೋಜನೆ ರೂಪಿಸಲು ಪ್ರಗತಿಪರ ರೈತರು ಕೂಡ ಸದಸ್ಯರಾಗುತ್ತಾರೆ.

ಈ ಯೋಜನೆ ರೈತರ ಬದುಕು ಸುಧಾರಿಸಲು, ಉತ್ಪಾದನೆ ಹೆಚ್ಚಿಸಲು ಮತ್ತು ನೀರಾವರಿ, ಸಂಗ್ರಹಣೆಯಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡಲು ಉದ್ದೇಶಿತ ಯೋಜನೆಯಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page