Home News Chess ನಲ್ಲಿ ಇತಿಹಾಸ ನಿರ್ಮಿಸಿದ 19 ವರ್ಷದ ಹೆಮ್ಮೆಯ ಭಾರತೀಯ ಮಹಿಳಾ ಆಟಗಾರ್ತಿ Divya Deshmukh

Chess ನಲ್ಲಿ ಇತಿಹಾಸ ನಿರ್ಮಿಸಿದ 19 ವರ್ಷದ ಹೆಮ್ಮೆಯ ಭಾರತೀಯ ಮಹಿಳಾ ಆಟಗಾರ್ತಿ Divya Deshmukh

102
Divya Deshmukh

ಭಾರತದ ಯುವ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ (Divya Deshmukh) ಅವರು 2025ರ FIDE ಮಹಿಳಾ ಚೆಸ್ ವಿಶ್ವಕಪ್‌ನ ಫೈನಲ್‌ಗಡೆ ತಲುಪುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ಕೇವಲ 19 ವರ್ಷದ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ದಿವ್ಯಾ, ಸೆಮಿಫೈನಲ್‌ನಲ್ಲಿ ಚೀನಾದ ಮಾಜಿ ವಿಶ್ವ ಚಾಂಪಿಯನ್ ಟಾನ್ ಝೊಂಗಿ ಅವರನ್ನು ಸೋಲಿಸಿದ್ದಾರೆ.

ಮೊದಲ ಸೆಮಿಫೈನಲ್ ಪಂದ್ಯ ಡ್ರಾ ಆದ ನಂತರ, ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ದಿವ್ಯಾ ತಮ್ಮ ಎದುರಾಳಿಗೆ ಕಠಿಣ ಪೈಪೋಟಿ ನೀಡಿದರು. ಆಟದ ವೇಳೆ ಟಾನ್ ಮಾಡಿದ ಕೆಲವು ತಪ್ಪುಗಳನ್ನು ಸದುಪಯೋಗ ಮಾಡಿಕೊಂಡ ದಿವ್ಯಾ, ಆಟವನ್ನು ತಮ್ಮ ಪಾಲು ಮಾಡಿಕೊಳ್ಳಲು ಯಶಸ್ವಿಯಾದರು. ಕೊನೆಗೆ 1.5-0.5 ಅಂಕಗಳಿಂದ ಗೆಲುವು ಗಳಿಸಿದರು.

ಈ ಮೂಲಕ ದಿವ್ಯಾ ದೇಶಮುಖ್, FIDE ಚೆಸ್ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ವಿಶಿಷ್ಟ ಗೌರವಕ್ಕೆ ಪಾತ್ರರಾದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page