back to top
29.1 C
Bengaluru
Wednesday, February 25, 2026
HomeNewsndia vs England: T20 ಹಾಗೂ ಏಕದಿನ ಪಂದ್ಯಗಳ ದಿನಾಂಕ ಪ್ರಕಟ

ndia vs England: T20 ಹಾಗೂ ಏಕದಿನ ಪಂದ್ಯಗಳ ದಿನಾಂಕ ಪ್ರಕಟ

- Advertisement -
- Advertisement -

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಈಗ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ಸದ್ಯ ಭಾರತ 2-1ರಿಂದ ಹಿನ್ನಡೆ ಹೊಂದಿದ್ದು, ಮ್ಯಾಂಚೆಸ್ಟರ್‌ನಲ್ಲಿ ನಾಲ್ಕನೇ ಟೆಸ್ಟ್ ನಡೆಯುತ್ತಿದೆ. ಭಾರತ ಗೆದ್ದರೆ ಸರಣಿ ಸಮಬಲವಾಗುತ್ತದೆ. ಆದರೆ ಸೋತರೆ ಸರಣಿಯ ಮೇಲೆ ಹಿಡಿತ ಕಳೆದುಕೊಳ್ಳುತ್ತದೆ. ಅಂತಿಮ ಟೆಸ್ಟ್ ಜುಲೈ 31 ರಂದು ನಡೆಯಲಿದೆ.

ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದು ಬಂದಿದೆ. ಬಿಸಿಸಿಐ (BCCI) ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ಏಕದಿನ ಹಾಗೂ 5 ಟಿ20 ಪಂದ್ಯಗಳ ದಿನಾಂಕವನ್ನು ಪ್ರಕಟಿಸಿದೆ.

ಭಾರತ ಮೊದಲಿಗೆ 5 ಟಿ20 ಪಂದ್ಯಗಳನ್ನು ಆಡಲಿದೆ. ನಂತರ 3 ಏಕದಿನ ಪಂದ್ಯಗಳು ನಡೆಯಲಿವೆ. ಈ ಸರಣಿ ಇತ್ತೀಚೆಗೆ ನಡೆಯಲ್ಲ, ಮುಂದಿನ ವರ್ಷ ಜುಲೈ (2026) ತಿಂಗಳಲ್ಲಿ ಆಯೋಜಿಸಲಾಗಿದೆ.

ಟಿ20 ಸರಣಿಯ ದಿನಾಂಕಗಳು

  • ಜುಲೈ 1 – ರಿವರ್ಸೈಡ್, ಡರ್ಹ್ಯಾಮ್
  • ಜುಲೈ 4 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
  • ಜುಲೈ 7 – ಟ್ರೆಂಟ್ ಬ್ರಿಡ್ಜ್, ನಾಟಿಂಗ್ಹ್ಯಾಮ್
  • ಜುಲೈ 9 – ಸೀಟ್ ಯೂನಿಕ್ ಕ್ರೀಡಾಂಗಣ, ಬ್ರಿಸ್ಟಲ್
  • ಜುಲೈ 11 – ಯುಟಿಲಿಟಾ ಬೌಲ್, ಸೌತಾಂಪ್ಟನ್

ಏಕದಿನ (ODI) ಸರಣಿಯ ದಿನಾಂಕಗಳು

  • ಜುಲೈ 14 – ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್
  • ಜುಲೈ 16 – ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
  • ಜುಲೈ 19 – ಲಾರ್ಡ್ಸ್, ಲಂಡನ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಈಗ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಪಡೆದಿರುವುದರಿಂದ, ಈ ಇಬ್ಬರನ್ನು ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ನೋಡಬಹುದಾಗಿರುವುದು ಅಭಿಮಾನಿಗಳಿಗೆ ಇನ್ನೊಂದು ಆಕರ್ಷಣೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page