back to top
25.6 C
Bengaluru
Friday, October 31, 2025
HomeBusinessಭಾರತದಲ್ಲಿ Tesla Charging Station ಆರಂಭಕ್ಕೆ ಸಿದ್ಧತೆ – ಮನೆಯಲ್ಲಿಯೂ ಚಾರ್ಜ್ ಮಾಡಬಹುದು!

ಭಾರತದಲ್ಲಿ Tesla Charging Station ಆರಂಭಕ್ಕೆ ಸಿದ್ಧತೆ – ಮನೆಯಲ್ಲಿಯೂ ಚಾರ್ಜ್ ಮಾಡಬಹುದು!

- Advertisement -
- Advertisement -

ಅಮೆರಿಕದ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ, ಭಾರತದಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್‌ನ್ನು ಮುಂದಿನ ವಾರ ಆರಂಭಿಸಲು ಸಿದ್ಧವಾಗಿದೆ. ಈ ಚಾರ್ಜಿಂಗ್ ಸೆಂಟರ್ ಮುಂಬೈನಲ್ಲಿ ಸ್ಥಾಪನೆಯಾಗಲಿದೆ.

ಚಾರ್ಜಿಂಗ್ ಸೆಂಟರ್‌ನಲ್ಲಿ ಈ ಸೌಲಭ್ಯಗಳು ಲಭ್ಯ

  • ಟೆಸ್ಲಾ ಚಾರ್ಜಿಂಗ್ ಸೆಂಟರ್‌ನಲ್ಲಿ ನಾಲ್ಕು V4 ಸೂಪರ್ ಚಾರ್ಜರ್‌ಗಳು (DC) ಮತ್ತು ನಾಲ್ಕು ಡೆಸ್ಟಿನೇಶನ್ ಚಾರ್ಜರ್‌ಗಳು (AC) ಇರುತ್ತವೆ.
  • ಸೂಪರ್ ಚಾರ್ಜರ್‌ಗಳು ಪ್ರತಿ ಕಿಲೊವಾಟ್‌ಗೆ ₹24 ದರದಲ್ಲಿ, 250 kW ವೇಗದಲ್ಲಿ ಚಾರ್ಜ್ ಮಾಡುತ್ತವೆ.
  • ಡೆಸ್ಟಿನೇಶನ್ ಚಾರ್ಜರ್‌ಗಳು ಪ್ರತಿ ಕಿಲೊವಾಟ್‌ಗೆ ₹14 ದರದಲ್ಲಿ, 11 kW ವೇಗದಲ್ಲಿ ಚಾರ್ಜ್ ಮಾಡುತ್ತವೆ.
  • ಮುಂಬೈ ಸೆಂಟರ್‌ ಸೇರಿದಂತೆ ಒಟ್ಟು 8 ಸೂಪರ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಭಾರತದಲ್ಲಿ ಸ್ಥಾಪಿಸಲು ಟೆಸ್ಲಾ ಯೋಜಿಸಿದೆ.

ಟೆಸ್ಲಾ ತನ್ನ ಜನಪ್ರಿಯ ಕಾರು ಮಾಡೆಲ್ ವೈ ಅನ್ನು ಬಿಡುಗಡೆ ಮಾಡಿದ್ದು, ಇದರ ಆರಂಭಿಕ ಬೆಲೆ ₹60 ಲಕ್ಷಕ್ಕಿಂತ ಕಡಿಮೆ ಇದೆ. ಮುಂಬೈನ ಬಾಂದ್ರಾ-ಕುರ್ಲಾದ ಮೇಕರ್ ಮ್ಯಾಕ್ಸಿಟಿ ನಲ್ಲಿ ಮೊದಲ ಶೋರೂಂ ಸಹ ತೆರೆದಿದೆ.

ತ್ವರಿತ ಚಾರ್ಜಿಂಗ್ ವೈಶಿಷ್ಟ್ಯ

  • ಟೆಸ್ಲಾ ಮಾಡೆಲ್ ವೈ ಕಾರು ಕೇವಲ 15 ನಿಮಿಷದಲ್ಲಿ ಸುಮಾರು 267 ಕಿಮೀ ಚಾರ್ಜ್ ಪಡೆಯಬಹುದು.
  • ಈ ಅಂತರವು ಮುಂಬೈನ ಗೇಟ್ವೇ ಆಫ್ ಇಂಡಿಯಾ ಮತ್ತು ವಿಮಾನ ನಿಲ್ದಾಣದ ನಡುವೆ ಐದು ಬಾರಿ ಹೋಗಿ ಬರುವಷ್ಟು ದೂರ.

ಮನೆಯಲ್ಲಿಯೂ ಚಾರ್ಜ್ ಮಾಡಲು ಸಾಧ್ಯ

  • ಹೊಸ ಕಾರು ಖರೀದಿಸುವವರಿಗೆ ಟೆಸ್ಲಾ ವಾಲ್ ಕನೆಕ್ಟರ್ (ಚಾರ್ಜಿಂಗ್ ಸಾಧನ) ಉಚಿತವಾಗಿ ನೀಡಲಾಗುತ್ತದೆ.
  • ಇದನ್ನು ನೇರವಾಗಿ ಮನೆಗೆ ಅಳವಡಿಸಿ, ಮನೆಯಲ್ಲಿಯೇ ಸುಲಭವಾಗಿ ಚಾರ್ಜ್ ಮಾಡಬಹುದು.

ಟೆಸ್ಲಾ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ್ದು, ಸುಧಾರಿತ ಚಾರ್ಜಿಂಗ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಅನುಕೂಲತೆ ಒದಗಿಸಲು ಉದ್ದೇಶಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page