Search
WhatsApp alerts

Home › News

ಭಾರತ ಪ್ರವಾಸಕ್ಕೆ Messi ಸಜ್ಜು; Modi ಸೇರಿದಂತೆ Cricket ತಾರೆಗಳನ್ನು ಭೇಟಿಯಾಗಲಿದ್ದಾರೆ

administrator · Published

Date fixed for PM Narendra Modi-Lionel Messi meeting

Kolkata: ಅರ್ಜೆಂಟೀನಾದ ಫುಟ್ಬಾಲ್ (football) ದಿಗ್ಗಜ ಲಿಯೋನೆಲ್ ಮೆಸ್ಸಿ (Lionel Messi) ಡಿಸೆಂಬರ್‌ನಲ್ಲಿ ಭಾರತಕ್ಕೆ ಬರಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮೆಸ್ಸಿ ಕೋಲ್ಕತಾ, ಅಹಮದಾಬಾದ್, ಮುಂಬೈ ಹಾಗೂ ನವದೆಹಲಿಗೆ ಭೇಟಿ ನೀಡಲಿದ್ದಾರೆ.

ಮೆಸ್ಸಿಯ ಪ್ರವಾಸ

ಡಿಸೆಂಬರ್ 12: ಮೆಸ್ಸಿ ಕೋಲ್ಕತಾಕ್ಕೆ ಆಗಮಿಸಲಿದ್ದಾರೆ.

ಡಿಸೆಂಬರ್ 13: ಕೋಲ್ಕತಾದಲ್ಲಿ 70 ಅಡಿ ಎತ್ತರವಿರುವ ತಮ್ಮ ಪ್ರತಿಮೆಯ ಅನಾವರಣ ಮಾಡಲಿದ್ದಾರೆ. ಬಳಿಕ ಸೌರವ್ ಗಂಗೂಲಿ ಮತ್ತು ಲಿಯಾಂಡರ್ ಪೇಸ್ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಅಹಮದಾಬಾದ್‌ನಲ್ಲಿ ಅದಾನಿ ಸಂಸ್ಥೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಡಿಸೆಂಬರ್ 14: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ತಾರಾ ಕ್ರಿಕೆಟಿಗರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ನಂತರ ಭಾರತೀಯ ಫುಟ್ಬಾಲ್ ತಂಡವನ್ನು ಭೇಟಿಯಾಗಲಿದ್ದಾರೆ.

ಡಿಸೆಂಬರ್ 15: ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಂದು ನಗರದಲ್ಲೂ ಅವರು ಮಕ್ಕಳಿಗೆ 15-20 ನಿಮಿಷ ಕಾಲ ಸಲಹೆ ನೀಡಲಿದ್ದಾರೆ.

ಇತರ ವಿಷಯಗಳು

  • ಮೆಸ್ಸಿ ಕ್ರಿಕೆಟ್ ದಂತಕಥೆಗಳಾದ ಧೋನಿ, ಕೊಹ್ಲಿ, ಸಚಿನ್ ಅವರ ಜೊತೆ ಕ್ರಿಕೆಟ್ ಆಡಲಿದ್ದಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ.
  • ಇನ್ನು ರಿಲಯನ್ಸ್ ನ ಫುಟ್ಬಾಲ್ ಸಂಸ್ಥೆ ಎಫ್ಎಸ್ಡಿಎಲ್ ಮತ್ತು ಎಐಎಫ್ಎಫ್ ನಡುವಿನ ಒಪ್ಪಂದ ತಕರಾರು ಹಿನ್ನೆಲೆ, ಈ ವರ್ಷ ಇಂಡಿಯನ್ ಸೂಪರ್ ಲೀಗ್ ನಡೆಯದಿರುವ ಸಾಧ್ಯತೆಯೂ ಇದೆ.
  • ಅಂತೆಯೇ, ಆ.14ರಂದು ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಭಾರತ-ಸಿಂಗಾಪುರ ನಡುವಿನ 2027 ಎಷ್ಯನ್ ಕಪ್ ಅರ್ಹತಾ ಪಂದ್ಯ ನಡೆಯುವ ಸಾಧ್ಯತೆ ಇದೆ.

ಇದು ಇನ್ನೂ ಎಎಫ್ಸಿ ವತಿಯಿಂದ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ, ಆದರೆ ನಿರೀಕ್ಷೆ ಜೋರಾಗಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page