Search
WhatsApp alerts

Home › Business

PM Kisan Sampada Yojana ಸರ್ಕಾರದಿಂದ ಹೆಚ್ಚುವರಿ 1,920 ಕೋಟಿ ರೂ. ನೆರವು

administrator · Published

PM Kisan Sampada Yojana

ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಂಪದ ಯೋಜನೆ (PMKSY-PM Kisan Sampada Yojana)ಗೆ 15ನೇ ಹಣಕಾಸು ಆಯೋಗದ ಅಡಿಯಲ್ಲಿ 6,520 ಕೋಟಿ ರೂ. ಪ್ಯಾಕೇಜ್ ಅನುಮೋದಿಸಲಾಗಿದೆ. ಇದರಲ್ಲೇ ಹೆಚ್ಚುವರಿಯಾಗಿ 1,920 ಕೋಟಿ ರೂ. ನೀಡಲಾಗಿದೆ.

ಯೋಜನೆಗಳ ಪ್ರಗತಿ

  • 2025ರ ಜೂನ್ ವರೆಗೆ ಒಟ್ಟು 1,601 ಪ್ರಾಜೆಕ್ಟ್‌ಗಳು ಅನುಮೋದನೆಗೊಂಡಿವೆ.
  • ಇವುಗಳಲ್ಲಿ 1,133 ಪ್ರಾಜೆಕ್ಟ್‌ಗಳು ಪೂರ್ಣಗೊಂಡಿವೆ.
  • ವರ್ಷಕ್ಕೆ 255.66 ಲಕ್ಷ ಮೆಟ್ರಿಕ್ ಟನ್ ಆಹಾರ ಸಂಸ್ಕರಣೆ ಸಾಮರ್ಥ್ಯ ನಿರ್ಮಾಣವಾಗಿದೆ.
  • ಎಲ್ಲಾ ಯೋಜನೆಗಳು ಪೂರ್ಣಗೊಂಡರೆ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಲಾಭ ಹಾಗೂ 7 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
  • ಒಟ್ಟು ₹21,803.19 ಕೋಟಿ ಹೂಡಿಕೆ ಸಾಧ್ಯತೆ ಇದೆ.

ಹಿಂದಿನ ಅನುದಾನ ಮತ್ತು ಹೊಸ ಉದ್ದೇಶಗಳು

  • ಈ ಯೋಜನೆ 2017ರಲ್ಲಿ ಆರಂಭವಾಗಿದ್ದು, ಪ್ರಾರಂಭದಲ್ಲಿ ₹6,000 ಕೋಟಿ ರೂ. ಮೀಸಲಿಟ್ಟು ₹31,400 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿತ್ತು.
  • ಈ ಬಾರಿ ಹೆಚ್ಚುವರಿಯಾಗಿ ನೀಡಿರುವ 1,920 ಕೋಟಿ ರೂ.ಯಲ್ಲಿ,
  • ₹1,000 ಕೋಟಿ – 50 ಮಲ್ಟಿ-ಪ್ರಾಡಕ್ಟ್ ಫುಡ್ ಇರೇಡಿಯೇಶನ್ ಯುನಿಟ್‌ಗಳು ಹಾಗೂ 100 ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಗೆ.
  • ₹920 ಕೋಟಿ – ಈಗಾಗಲೇ ನಡೆಯುತ್ತಿರುವ ವಿವಿಧ ಕಾರ್ಯಗಳಿಗೆ.

ಯೋಜನೆಯ ಉದ್ದೇಶ

  • ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಆಧುನಿಕ ಸೌಕರ್ಯ ನಿರ್ಮಾಣ.
  • ರೈತರ ಉತ್ಪನ್ನಗಳನ್ನು ತೋಟದಿಂದ ಅಂಗಡಿಯವರೆಗೆ ತಲುಪಿಸುವ ಸರಬರಾಜು ಸರಪಳಿಯನ್ನು ಬಲಪಡಿಸುವುದು.
  • ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದು ಹಾಗೂ ಉತ್ಪನ್ನ ವ್ಯರ್ಥವಾಗುವ ಪ್ರಮಾಣ ಕಡಿಮೆಗೊಳಿಸುವುದು.
  • ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸುವುದು.
  • ಸಂಸ್ಕರಿತ ಆಹಾರ ವಸ್ತುಗಳ ರಫ್ತಿನ ಬೇಡಿಕೆಯನ್ನು ಪೂರೈಸುವುದು.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page