ಆಗಸ್ಟ್ 3 ರಂದು ಇಂಗ್ಲೆಂಡ್‌ನ ಕ್ಯಾಂಟರ್ಬರಿಯಲ್ಲಿ ನಡೆಯುತ್ತಿದ್ದ ಪಾಕಿಸ್ತಾನ ಎ ಹಾಗೂ ಇಂಗ್ಲೆಂಡ್ ಎ ತಂಡಗಳ ನಡುವಿನ ಪಂದ್ಯದಲ್ಲಿ, ಪಾಕಿಸ್ತಾನದ 24 ವರ್ಷದ ಬ್ಯಾಟ್ಸ್‌ಮನ್ ಹೈದರ್ ಅಲಿಯನ್ನು (Haider Ali) ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಮೈದಾನದಲ್ಲೇ ಬಂಧಿಸಿದರು. ಅವರ ಮೇಲೆ ಪಾಕಿಸ್ತಾನಿ ಮೂಲದ ಯುವತಿಯೊಬ್ಬಳಿಗೆ ಅತ್ಯಾಚಾರ ಎಸಗಿದ ಆರೋಪವಿದೆ.
ಬಂಧನದ ನಂತರ ಹೈದರ್ ಅಲಿಗೆ ಜಾಮೀನು ದೊರಕಿದರೂ, ಅವರ ಪಾಸ್ಪೋರ್ಟ್‌ನ್ನು ವಶಪಡಿಸಿಕೊಂಡಿರುವ ಕಾರಣ ಅವರು ದೇಶ ಬಿಟ್ಟುಕೊಳ್ಳಲು ಸಾಧ್ಯವಿಲ್ಲ. ಘಟನೆ ಬೆಳಕಿಗೆ ಬಂದ ತಕ್ಷಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಮುಂದುವರಿಯಲಿದೆ.
ಪಿಸಿಬಿ ಯುನೈಟೆಡ್ ಕಿಂಗ್ಡಂನ ಕಾನೂನು ಪ್ರಕ್ರಿಯೆಗಳನ್ನು ಗೌರವಿಸುತ್ತಿದ್ದು, ಮ್ಯಾಂಚೆಸ್ಟರ್ ಪೊಲೀಸರೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಹೈದರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ನೆರವು ನೀಡುವುದನ್ನೂ ಘೋಷಿಸಿದೆ.
ಕ್ರಿಕೆಟ್ ವೃತ್ತಿ
- 2020ರಲ್ಲಿ ಪಾಕಿಸ್ತಾನ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶ.
- 35 ಟಿ20ಐ ಪಂದ್ಯಗಳಲ್ಲಿ 505 ರನ್ (ಸರಾಸರಿ 17.41), 3 ಅರ್ಧಶತಕಗಳು.
- 2 ಏಕದಿನ ಪಂದ್ಯಗಳಲ್ಲಿ 42 ರನ್ (ಸರಾಸರಿ 21).
- 2020 ಅಂಡರ್-19 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ರಾಷ್ಟ್ರೀಯ ತಂಡಕ್ಕೆ ಅವಕಾಶ.
ಇಂಗ್ಲೆಂಡ್ ಪ್ರವಾಸದ ಪ್ರದರ್ಶನ
- ಶಾಹೀನ್ ಪರ 5 ಪಂದ್ಯಗಳಲ್ಲಿ ಆಡಿದರು.
- 3 ಅನಧಿಕೃತ ಏಕದಿನಗಳಲ್ಲಿ 141 ರನ್; 3 ದಿನಗಳ ಟೆಸ್ಟ್‌ನಲ್ಲಿ ಕೇವಲ 18 ರನ್.
- ಏಕದಿನ ಸರಣಿ: ಪಾಕಿಸ್ತಾನ ಎ ತಂಡವು 2-1 ಅಂತರದಿಂದ ಜಯ.
- ಟೆಸ್ಟ್ ಸರಣಿ: ಡ್ರಾ.







