
ಇಂಗ್ಲೆಂಡ್‌ನ ದಿ ಹಂಡ್ರೆಡ್ ಟೂರ್ನಿಯಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ (Birmingham Phoenix) ತಂಡದ ನಾಯಕ ಲಿಯಾಮ್ ಲಿವಿಂಗ್ಸ್ಟೋನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ 4 ವಿಕೆಟ್ ಜಯ ತಂದುಕೊಟ್ಟರು.
181 ರನ್ ಗುರಿ ಬೆನ್ನಟ್ಟಿದ Birmingham ತಂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ, ವಿಲ್ ಸಮೀದ್ (51) ಅರ್ಧಶತಕ ಬಾರಿಸಿ ತಂಡಕ್ಕೆ ಬಲ ತುಂಬಿದರು.
ನಂತರ ಬಂದ ಲಿವಿಂಗ್ಸ್ಟೋನ್ ಕೇವಲ 27 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ಅಜೇಯ 69 ರನ್ ಬಾರಿಸಿ ಗೆಲುವು ಖಚಿತಪಡಿಸಿದರು. 2 ಎಸೆತ ಬಾಕಿ ಇರುವಾಗ 182 ರನ್ ಸೇರಿಸಿ Birmingham ಮೊದಲ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಓವಲ್ ಇನ್ವಿನ್ಸಿಬಲ್ಸ್ ತಂಡದಲ್ಲಿ ಡೊನೊವನ್ ಫೆರೇರಾ (63) ಅಬ್ಬರಿಸಿದರೂ, 180 ರನ್‌ಗೇ ತೃಪ್ತಿಪಟ್ಟಿತು. ಈ ಸೋಲಿನಿಂದ ಓವಲ್ ತಂಡದ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನವಾಯಿತು.