Lucknow (Uttar Pradesh): ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ಅವರನ್ನು ಹೊಗಳಿದ ಕೆಲವೇ ಗಂಟೆಗಳಲ್ಲಿ, ಸಮಾಜವಾದಿ ಪಕ್ಷ (ಎಸ್‌ಪಿ) ಶಾಸಕಿ ಪೂಜಾ ಪಾಲ್ (SP MLA Pooja Pal) ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಪಕ್ಷವು ಇದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ವಿವರಿಸಿದೆ.
ಪೂಜಾ ಪಾಲ್ ಅವರು ಕೌಶಾಂಬಿ ಜಿಲ್ಲೆಯ ಚೈಲ್ ಕ್ಷೇತ್ರದ ಶಾಸಕಿ. ಅವರು ದಿವಂಗತ ರಾಜು ಪಾಲ್ ಅವರ ಪತ್ನಿ. 2005ರಲ್ಲಿ ರಾಜು ಪಾಲ್ ಅವರನ್ನು ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್ ತಂಡ ಗುಂಡಿಕ್ಕಿ ಹತ್ಯೆ ಮಾಡಿತ್ತು. ಅತಿಕ್ ಅಹ್ಮದ್ 2023ರಲ್ಲಿ ಸಹೋದರನೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ಪೊಲೀಸ್ ವಶದಲ್ಲಿದ್ದಾಗ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದ.
ವಿಧಾನಸಭೆಯಲ್ಲಿ ‘ವಿಷನ್ 2047’ ಚರ್ಚೆಯಲ್ಲಿ ಮಾತನಾಡಿದ ಪೂಜಾ ಪಾಲ್, “ನನ್ನ ನೋವನ್ನು ಗುರುತಿಸಿ ನ್ಯಾಯ ನೀಡಿದ ಸಿಎಂ ಯೋಗಿ ಅವರಿಗೆ ಧನ್ಯವಾದಗಳು. ಅತಿಕ್ ಅಹ್ಮದ್‌ಗಳಂತಹ ಅಪರಾಧಿಗಳನ್ನು ನಿರ್ಮೂಲನೆ ಮಾಡಿದ ಶೂನ್ಯಸಹಿಷ್ಣುತೆ ನೀತಿ ಶ್ಲಾಘನೀಯ” ಎಂದು ಪ್ರಶಂಸೆ ಮಾಡಿದರು.
ಅದೇ ದಿನ ಸಂಜೆ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅವರನ್ನು ಎಸ್‌ಪಿಯಿಂದ ಹೊರಹಾಕಿದರು.