
Pakistan ದಲ್ಲಿ ಭಾರಿ ಮಳೆ ಸಂಬಂಧಿತ ಘಟನೆಗಳಲ್ಲಿ 657 ಮಂದಿ ಮೃತಪಟ್ಟಿದ್ದಾರೆ. 929 ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ತಿಳಿಸಿದೆ.
ಸಾವುಗಳಲ್ಲಿ 392 ಪುರುಷರು, 171 ಮಕ್ಕಳು ಮತ್ತು 94 ಮಹಿಳೆಯರು ಸೇರಿದ್ದಾರೆ. ಗಾಯಗೊಂಡವರಲ್ಲಿ 437 ಪುರುಷರು, 256 ಮಕ್ಕಳು ಮತ್ತು 236 ಮಹಿಳೆಯರು ಸೇರಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭೀಕರ ನಷ್ಟ
- ಅತಿ ಹೆಚ್ಚು ಹಾನಿಗೊಳಗಾದ ಪ್ರಾಂತ್ಯ ಖೈಬರ್ ಪಖ್ತುಂಖ್ವಾ.ಒಟ್ಟು 390 ಮಂದಿ
- ಮೃತಪಟ್ಟಿದ್ದಾರೆ (288 ಪುರುಷರು, 59 ಮಕ್ಕಳು, 43 ಮಹಿಳೆಯರು).
- ಗಾಯಗೊಂಡವರ ಸಂಖ್ಯೆ: 245.
- ಪಂಜಾಬ್ ಪ್ರಾಂತ್ಯದಲ್ಲಿ ಸಾವು-ಗಾಯಗಳು
- ಜೂನ್ 26ರಿಂದ ಪಂಜಾಬ್ನಲ್ಲಿ 164 ಸಾವುಗಳು ದಾಖಲಾಗಿವೆ.
- ಬಲಿಯಾದವರಲ್ಲಿ 70 ಮಕ್ಕಳು, 63 ಪುರುಷರು, 31 ಮಹಿಳೆಯರು ಸೇರಿದ್ದಾರೆ.
- ಗಾಯಗೊಂಡವರ ಸಂಖ್ಯೆ: 582.
- ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ
- ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ (18 ಪುರುಷರು, 6 ಮಹಿಳೆಯರು, 8 ಮಕ್ಕಳು).
- ಗಾಯಗೊಂಡವರು: 31.
- ಜಮ್ಮು ಮತ್ತು ಕಾಶ್ಮೀರದಲ್ಲಿ 15 ಮಂದಿ ಮೃತಪಟ್ಟಿದ್ದಾರೆ (5 ಪುರುಷರು, 5 ಮಹಿಳೆಯರು, 5 ಮಕ್ಕಳು).
- ಸಿಂಧ್ ಪ್ರಾಂತ್ಯದ ಹಾನಿ
- 28 ಸಾವುಗಳು ವರದಿಯಾಗಿವೆ (14 ಮಕ್ಕಳು, 10 ಪುರುಷರು, 4 ಮಹಿಳೆಯರು).
- ಗಾಯಗೊಂಡವರು: 40 (27 ಮಕ್ಕಳು, 7 ಪುರುಷರು, 6 ಮಹಿಳೆಯರು).
- ಬಲೂಚಿಸ್ತಾನ್ ಪ್ರಾಂತ್ಯ
- ಸುಮಾರು 20 ಸಾವುಗಳು ವರದಿಯಾಗಿವೆ.
ಪರಿಹಾರ ಕಾರ್ಯಾಚರಣೆ
- ಧಾರಾಕಾರ ಮಳೆ, ಪ್ರವಾಹ ಹಾಗೂ ಸಂಬಂಧಿತ ಅಪಾಯಗಳಿಂದ ಈ ಸಾವು-ನೋವುಗಳು ಸಂಭವಿಸಿದ್ದವು.
- ಎನ್ಡಿಎಂಎ ಪ್ರಕಾರ, ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ.