back to top
28.2 C
Bengaluru
Saturday, August 30, 2025
HomeNewsಏಕದಿನ ಕ್ರಿಕೆಟ್‌ಗೆ Smith-Maxwell ವಿದಾಯ

ಏಕದಿನ ಕ್ರಿಕೆಟ್‌ಗೆ Smith-Maxwell ವಿದಾಯ

- Advertisement -
- Advertisement -

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಆಗಸ್ಟ್ 19ರಿಂದ ಆರಂಭವಾದ ಏಕದಿನ ಸರಣಿಯಲ್ಲಿ ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಕಾಣಿಸಿಕೊಳ್ಳುವುದಿಲ್ಲ. ದೀರ್ಘಕಾಲದಿಂದ ಆಸ್ಟ್ರೇಲಿಯಾ ಪರ ಏಕದಿನ ಪಂದ್ಯಗಳಲ್ಲಿ ಆಡುತ್ತಿದ್ದ ಈ ಇಬ್ಬರು ಸ್ಟಾರ್ ಆಟಗಾರರಿಲ್ಲದೆ ತಂಡ ಕಣಕ್ಕಿಳಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇದರಿಂದ ಅವರ ಏಕದಿನ ಕ್ರಿಕೆಟ್ ಯುಗಕ್ಕೆ ಅಂತ್ಯವಾದಂತಾಗಿದೆ.

ಸ್ಟೀವ್ ಸ್ಮಿತ್ ಸಾಧನೆ

  • ಆಸ್ಟ್ರೇಲಿಯಾ ಪರ 170 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.
  • 155 ಇನಿಂಗ್ಸ್‌ಗಳಲ್ಲಿ 12 ಶತಕ, 35 ಅರ್ಧಶತಕ ಸೇರಿ 5800 ರನ್ ಗಳಿಸಿದ್ದಾರೆ.
  • ಟಿ20 ವಿಶ್ವಕಪ್‌ನಲ್ಲಿ ಆಯ್ಕೆಯಾಗದಿದ್ದರೂ, ಮುಂದಿನ ದಿನಗಳಲ್ಲಿ ಟೆಸ್ಟ್ ತಂಡದಲ್ಲಿ ಮಾತ್ರ ಮುಂದುವರಿಯುವ ಸಾಧ್ಯತೆ ಇದೆ.

ಗ್ಲೆನ್ ಮ್ಯಾಕ್ಸ್ವೆಲ್ ಸಾಧನೆ

  • 149 ಏಕದಿನ ಪಂದ್ಯಗಳಲ್ಲಿ 136 ಇನಿಂಗ್ಸ್‌ ಆಡಿದ್ದಾರೆ.
  • ಒಟ್ಟು 3990 ರನ್ ಗಳಿಸಿದ್ದು, ಇದರಲ್ಲಿ 1 ದ್ವಿಶತಕ, 4 ಶತಕ ಮತ್ತು 23 ಅರ್ಧಶತಕಗಳಿವೆ.
  • ಬೌಲರ್ ಆಗಿಯೂ ಕೊಡುಗೆ ನೀಡಿ, 119 ಇನಿಂಗ್ಸ್‌ಗಳಲ್ಲಿ 77 ವಿಕೆಟ್ ಪಡೆದಿದ್ದಾರೆ.
  • ಏಕದಿನ ಕ್ರಿಕೆಟ್‌ನಲ್ಲಿ 3000+ ರನ್ ಹಾಗೂ 50+ ವಿಕೆಟ್ ಪಡೆದ ಅರಿಯ ಆಲ್ರೌಂಡರ್‌ಗಳಲ್ಲಿ ಒಬ್ಬರು.

ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಮ್ಯಾಕ್ಸ್ವೆಲ್, 2026ರ ಟಿ20 ವಿಶ್ವಕಪ್‌ವರೆಗೆ ಆಡಲು ನಿರ್ಧರಿಸಿದ್ದಾರೆ. ಆ ನಂತರ ಚುಟುಕು ಕ್ರಿಕೆಟ್‌ನಿಂದ ಸಂಪೂರ್ಣ ವಿದಾಯ ಹೇಳುವ ನಿರೀಕ್ಷೆಯಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page