New Delhi: ಟರ್ಮ್ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ (insurance premiums) ಮೇಲಿನ GST ಕಡಿಮೆ ಮಾಡುವ ಬಗ್ಗೆ ಸರ್ಕಾರ ಯೋಚಿಸಿದೆ. ಜಿಎಸ್ಟಿ ಕೌನ್ಸಿಲ್ ಈ ನಿರ್ಧಾರ ಕೈಗೊಂಡರೆ ಜನರಿಗೆ ವಿಮೆ ಹೆಚ್ಚು ಸುಲಭವಾಗಬಹುದು. ಈಗ ಪ್ರೀಮಿಯಮ್ ಮೇಲೆ ಶೇ.18 GST ಇದೆ. ಅದನ್ನು ಶೂನ್ಯ ಅಥವಾ ಶೇ.5ಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
60 ವರ್ಷ ಮೇಲ್ಪಟ್ಟವರ ಹೆಲ್ತ್ ಹಾಗೂ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ಗೆ ಯಾವುದೇ GST ವಿಧಿಸಲಾಗುವುದಿಲ್ಲ.
ಯಾವುದೇ ವಯಸ್ಸಿನವರು ತೆಗೆದುಕೊಳ್ಳುವ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ಗೆ GST ವಿನಾಯಿತಿ ನೀಡುವ ಸಾಧ್ಯತೆ ಇದೆ.
ಹೆಲ್ತ್ ಇನ್ಷೂರೆನ್ಸ್‌ನಲ್ಲಿ 5 ಲಕ್ಷ ರೂವರೆಗಿನ ಕವರೇಜ್ ಇರುವ ಪ್ಲಾನ್‌ಗಳಿಗೆ GST ಬೇಡ.
5 ಲಕ್ಷ ರೂಗಿಂತ ಹೆಚ್ಚಿನ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿಗೆ GST ಇಳಿಕೆ – ಈಗ ಶೇ.18 ಇದ್ದು, ಅದನ್ನು ಶೇ.5ಕ್ಕೆ ಇಳಿಸಲು ಯೋಜನೆ ಇದೆ.
ಮುಖ್ಯ ಪ್ರಸ್ತಾಪಗಳ ಸಾರಾಂಶ
- ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ಗೆ ಜಿಎಸ್ಟಿ ಬೇಡ
- ಹೆಲ್ತ್ ಇನ್ಷೂರೆನ್ಸ್ (5 ಲಕ್ಷ ರೂವರೆಗಿನ) ಪ್ರೀಮಿಯಮ್ಗೆ GST ಬೇಡ
- 5 ಲಕ್ಷ ರೂ ಮೇಲ್ಪಟ್ಟ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಶೇ.18 ಬದಲು ಶೇ.5 GST
- ಹಿರಿಯ ನಾಗರಿಕರ ಎಲ್ಲಾ ಇನ್ಷೂರೆನ್ಸ್ ಪಾಲಿಸಿಗಳಿಗೆ GST ವಿನಾಯಿತಿ