back to top
24 C
Bengaluru
Saturday, August 30, 2025
HomeNewsAgni-5: ಭಾರತದ ಆಕಾಶದಿಂದ ಹೊಮ್ಮಿದ ಅಜೇಯ ಶಕ್ತಿ

Agni-5: ಭಾರತದ ಆಕಾಶದಿಂದ ಹೊಮ್ಮಿದ ಅಜೇಯ ಶಕ್ತಿ

- Advertisement -
- Advertisement -

ಒಡಿಶಾದ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಲ್ಲಿ ಬುಧವಾರ ‘ಅಗ್ನಿ-5’ (Agni-5) ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಯಿತು. ಎಲ್ಲಾ ತಾಂತ್ರಿಕ ಅಂಶಗಳು ಹಾಗೂ ಕಾರ್ಯಾಚರಣೆಗಳು ದೃಢಪಟ್ಟವು.

ಕ್ಷಿಪಣಿಯ ಮೂಲ ಮಾಹಿತಿ

  • DRDO ಅಭಿವೃದ್ಧಿಪಡಿಸಿದ ಲಾಂಗ್-ರೇಂಜ್ ಪರಮಾಣು ಸಾಮರ್ಥ್ಯ ಕ್ಷಿಪಣಿ
  • ಉದ್ದ: 17 ಮೀಟರ್, ಅಗಲ: 2 ಮೀಟರ್
  • ಪೇಲೋಡ್ ಸಾಮರ್ಥ್ಯ: 1 ಟನ್ ಪರಮಾಣು ಸಿಡಿತಲೆ
  • ಭೂ-ಆಧಾರಿತ ಪರಮಾಣು ನಿರೋಧಕ ಸಾಮರ್ಥ್ಯದ ಬೆನ್ನೆಲುಬು

ವಿಶೇಷತೆಗಳು

  • ಮಾರ್ಗದರ್ಶನ ಮತ್ತು ಸಂಚರಣೆ ತಂತ್ರಜ್ಞಾನ
  • ಅತ್ಯಾಧುನಿಕ ಎಂಜಿನ್, ಗೈಡೆನ್ಸ್ ಹಾಗೂ ನ್ಯಾವಿಗೇಶನ್ ವ್ಯವಸ್ಥೆ.
  • ಬಹು ಗುರಿಗಳನ್ನು ನಿಖರವಾಗಿ ಹೊಡೆಯುವ ಸಾಮರ್ಥ್ಯ.
  • MIRV ತಂತ್ರಜ್ಞಾನ (Multiple Independently Targetable Re-entry Vehicle)
  • ಒಂದೇ ಕ್ಷಿಪಣಿ ಅನೇಕ ಗುರಿಗಳನ್ನು ಏಕಕಾಲದಲ್ಲಿ ಹೊಡೆಯಲು ಸಾಮರ್ಥ್ಯ.
  • ಪ್ರತಿಯೊಂದು ಸಿಡಿತಲೆಯನ್ನು ವಿಭಿನ್ನ ಸ್ಥಳಗಳತ್ತ ದಾಳಿ ಮಾಡಲು ಬಳಸಬಹುದು.
  • ವ್ಯಾಪ್ತಿ
  • ಗರಿಷ್ಠ 4790 ಕಿಮೀ ದೂರವರೆಗೂ ಹೊಡೆಯುವ ಸಾಮರ್ಥ್ಯ.
  • 3-ಹಂತದ ಪ್ರೊಪಲ್ಷನ್ ವ್ಯವಸ್ಥೆ
  • ಕ್ಷಿಪಣಿಯ ವೇಗ ಮತ್ತು ತಲುಪುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇತ್ತೀಚಿನ ನವೀಕರಣಗಳು

  • ಸುಧಾರಿತ ಏವಿಯಾನಿಕ್ಸ್ ಮತ್ತು ಗೈಡೆನ್ಸ್ ಸಿಸ್ಟಂ
  • ಮರುಪ್ರವೇಶದ ವೇಳೆ ಉಂಟಾಗುವ ತಾಪದಿಂದ ರಕ್ಷಿಸುವ ಹೀಟ್ ಶೀಲ್ಡ್
  • ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಹೊಸ ತಂತ್ರಜ್ಞಾನ

ಬಂಕರ್ ಬಸ್ಟರ್ ಆವೃತ್ತಿ (ಪರಮಾಣು ರಹಿತ)

DRDO ವಾಯುಪಡೆಯಿಗಾಗಿ ವಿಶೇಷ ಆವೃತ್ತಿ ತಯಾರಿಸುತ್ತಿದೆ,

  • ಏರ್ ಬಸ್ಟರ್
  • ಗಾಳಿಯಲ್ಲೇ ಸ್ಫೋಟಿಸಿ ದೊಡ್ಡ ಪ್ರದೇಶದ ರನ್‌ವೇ, ವಾಯುನೆಲೆ, ರಾಡಾರ್ ನಾಶಪಡಿಸುತ್ತದೆ.
  • ಬಂಕರ್ ಬಸ್ಟರ್
  • ನೆಲದೊಳಗೆ 80–100 ಮೀಟರ್ ಭೇದಿಸಿ ಶತ್ರುಗಳ ಕಮಾಂಡ್ ಸೆಂಟರ್ ಅಥವಾ ಪರಮಾಣು ಭಂಡಾರ ನಾಶಪಡಿಸುವ ಸಾಮರ್ಥ್ಯ.
  • ವ್ಯಾಪ್ತಿ: 2500 ಕಿಮೀ

ಅಗ್ನಿ-5 ಯಶಸ್ವಿ ಪರೀಕ್ಷೆಯೊಂದಿಗೆ ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಿದೆ. ಶತ್ರುಗಳ ಮೇಲೆ ಬಲವಾದ ತಡೆಗಟ್ಟುವ ಶಕ್ತಿ ದೊರೆಯುವುದಲ್ಲದೇ, ‘ಅಗ್ನಿ ಪರಿವಾರ’ದಲ್ಲಿ ಮುಂದಿನ ಹೆಜ್ಜೆಯಾಗಿರುವ ಅಗ್ನಿ-6 ಕ್ಷಿಪಣಿ ಈಗ ನಿರೀಕ್ಷೆಯಲ್ಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page