back to top
21.7 C
Bengaluru
Monday, October 27, 2025
HomeKarnatakaUdupi: ಅನಾಮಿಕನ ಬಂಧನ, Home Minister Parameshwar ಹೇಳಿಕೆ

Udupi: ಅನಾಮಿಕನ ಬಂಧನ, Home Minister Parameshwar ಹೇಳಿಕೆ

- Advertisement -
- Advertisement -

Udupi: ರಾಜ್ಯವನ್ನು ಕಂಗೊಳಿಸಿದ್ದ ಶವ ಉತ್ಖನನ ಪ್ರಕರಣದಲ್ಲಿ ಪ್ರಧಾನ ದೂರುದಾರನಾದ ಅನಾಮಿಕ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (Home Minister Parameshwar) ದೃಢಪಡಿಸಿದ್ದಾರೆ.

ಅವರು ಮಾಧ್ಯಮದೊಂದಿಗೆ ಮಾತನಾಡಿ, ಆ ವ್ಯಕ್ತಿ ಈಗ ಪೊಲೀಸರ ಕಸ್ಟಡಿಯಲ್ಲಿ ಇದ್ದಾನೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಎಸ್ಐಟಿ ತನಿಖೆ ಮುಂದುವರಿಯುತ್ತಿದೆ, ವರದಿ ಬರುವವರೆಗೆ ಯಾವುದನ್ನೂ ಬಹಿರಂಗಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ತನಿಖೆ ಮುಗಿಯುವವರೆಗೂ ಜಾಲದ ವಿವರ ಬಹಿರಂಗ ಮಾಡುವಂತಿಲ್ಲ. ಸುಜಾತ ಭಟ್ ಪ್ರಕರಣ ಕೂಡ ಎಸ್ಐಟಿ ತನಿಖೆಯಲ್ಲಿದೆ. ಬೇರೆ ಬೇರೆ ಆರೋಪಗಳು, ಹೇಳಿಕೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಅಂತಿಮ ವರದಿ ಬಂದ ಬಳಿಕ ಮಾತ್ರ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

ಬಂಧನ ಯಾವ ಸೆಕ್ಷನ್‌ನಡಿ ನಡೆದಿದೆ ಎಂಬುದು ಎಸ್ಐಟಿ ಅಧಿಕಾರಿಗಳಿಗೆ ಮಾತ್ರ ಗೊತ್ತು ಎಂದು ಸ್ಪಷ್ಟಪಡಿಸಿದ ಪರಮೇಶ್ವರ್, “ನಾನು ಹೇಳಬಲ್ಲದ್ದು ಅರೆಸ್ಟ್ ಆಗಿರುವುದಷ್ಟೇ” ಎಂದು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page