Search
WhatsApp alerts

Home › Karnataka

ಭ್ರೂಣಹತ್ಯೆ ತಡೆಯಲು ಬೆಂಗಳೂರಿನಲ್ಲಿ ‘Save Mom’ ಯೋಜನೆ

administrator · Published

‘Save Mom’ scheme in Bengaluru to prevent foeticide

Bengaluru: ಭ್ರೂಣಹತ್ಯೆಗಳನ್ನು ತಡೆಯಲು ಹಲವಾರು ಜಾಗೃತಿ ಮೂಡಿಸಿದರೂ ಸಂಪೂರ್ಣ ಫಲಿತಾಂಶ ಕಾಣಿಸುತ್ತಿಲ್ಲ. ಈ ಕಾರಣಕ್ಕೆ ಹೆಣ್ಣು ಭ್ರೂಣವನ್ನು ಕಾಪಾಡಲು ಸರ್ಕಾರ ಹೊಸ ಯೋಜನೆಗಳನ್ನು ತರಲು ಮುಂದಾಗಿದೆ. ಇದೀಗ ಆಂಧ್ರ ಪ್ರದೇಶದ ಮಾದರಿಯನ್ನು ಅನುಸರಿಸಿ ಬೆಂಗಳೂರಿನಲ್ಲಿ ‘ಸೇವ್ ಮಾಮ್’ (Save Mom) ಎಂಬ ಯೋಜನೆ ಜಾರಿಗೆ ಬರಲಿದೆ.

ಏಕೆ ಈ ಯೋಜನೆ ಅಗತ್ಯ

  • ಅನೇಕ ಗರ್ಭಿಣಿಯರ ಮಾಹಿತಿ (ಡಾಟಾ) ಮಿಸ್ಸಿಂಗ್ ಆಗುತ್ತಿದೆ.
  • ತಾಯಿ ಕಾರ್ಡ್ ಮಾಡಿದ ನಂತರ, ನಿಯಮಿತ ತಪಾಸಣೆಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ.
  • ಗರ್ಭಪಾತದ ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಾಗುತ್ತಿವೆ.
  • ತಾಯಿ ಹಾಗೂ ಮಗು ಸುರಕ್ಷಿತವಾಗಿರುವರೇ ಎಂಬುದರ ಸ್ಪಷ್ಟ ಮಾಹಿತಿ ಇಲ್ಲ.

ಹೇಗೆ ಕೆಲಸ ಮಾಡಲಿದೆ ‘ಸೇವ್ ಮಾಮ್’

  • ಗರ್ಭಿಣಿಯರ ಮಾಹಿತಿಯನ್ನು ಆನ್‌ಲೈನ್ ಆ್ಯಪ್ ಮೂಲಕ ಆರೋಗ್ಯ ಇಲಾಖೆಯ ಪೋರ್ಟಲ್‌ಗೆ ಕಳುಹಿಸಲಾಗುತ್ತದೆ.
  • ಅವರು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಅವರ ವಿವರಗಳನ್ನು ಟ್ರಾಕ್ ಮಾಡಲಾಗುತ್ತದೆ.
  • ಗರ್ಭಿಣಿಯಾಗುವ ಕ್ಷಣದಿಂದ ಮಗು ಹುಟ್ಟಿ 2 ವರ್ಷದವರೆಗೂ ಎಲ್ಲಾ ಮಾಹಿತಿಯನ್ನು ಟ್ರಾಕ್ ಮಾಡಲಾಗುತ್ತದೆ.
  • ಆಶಾ ಕಾರ್ಯಕರ್ತೆಯರು ಆ್ಯಪ್ ಮೂಲಕ ಸಂಪೂರ್ಣ ಮಾಹಿತಿ ಅಪ್ಲೋಡ್ ಮಾಡುವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.

ಈ ಯೋಜನೆ ಮೂಲಕ ಗರ್ಭಿಣಿಯರ ಮಾಹಿತಿ ಮಿಸ್ಸಿಂಗ್ ಆಗುವ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಜೊತೆಗೆ ತಾಯಿ ಮತ್ತು ಮಗುವಿನ ಸುರಕ್ಷತೆ ಕುರಿತು ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

‘ಸೇವ್ ಮಾಮ್’ ಯೋಜನೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಜಾರಿಯಾದರೆ ಭ್ರೂಣಹತ್ಯೆ ತಡೆಗಟ್ಟಲು ಮಹತ್ತರ ಹೆಜ್ಜೆಯಾಗಲಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page