
ಪ್ರತಿ ವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು (National Sports Day) ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸುತ್ತಾರೆ.
ಮೇಜರ್ ಧ್ಯಾನ್ಚಂದ್ – ಹಾಕಿ ಮಾಂತ್ರಿಕ
- ಧ್ಯಾನ್‌ಚಂದ್ 1905ರ ಆಗಸ್ಟ್ 29ರಂದು ಪ್ರಯಾಗ್ರಾಜ್‌ನಲ್ಲಿ ಜನಿಸಿದರು.
- ಅವರು ಭಾರತ ಪರವಾಗಿ 185 ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ 570 ಗೋಲು ಗಳಿಸಿದ್ದಾರೆ.
- 1928ರಿಂದ 1936ರ ವರೆಗೆ ನಡೆದ ಮೂರು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸತತ ಚಿನ್ನದ ಪದಕ ತಂದಿದ್ದಾರೆ.
- ಅವರ ಆಟದಿಂದಲೇ ಭಾರತ ಹಾಕಿಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿತು.
ರಾಷ್ಟ್ರೀಯ ಕ್ರೀಡಾ ದಿನ ಯಾವಾಗ ಆರಂಭವಾಯಿತು?
- 2012ರಲ್ಲಿ, ಧ್ಯಾನ್‌ಚಂದ್ ಜಯಂತಿಯನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಘೋಷಿಸಲಾಯಿತು.
- ಆಗಿನಿಂದ ಪ್ರತಿವರ್ಷ ಆಗಸ್ಟ್ 29ರಂದು ಈ ದಿನವನ್ನು ಆಚರಿಸಲಾಗುತ್ತಿದೆ.
- 2019ರಲ್ಲಿ, ಇದೇ ದಿನದಂದು “ಫಿಟ್ ಇಂಡಿಯಾ ಅಭಿಯಾನ”ವನ್ನು ಪ್ರಾರಂಭಿಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ರಿಕೆಟ್ನಿಂದ ಹಿಡಿದು ಹಾಕಿ, ಟೆನಿಸ್, ಬ್ಯಾಡ್ಮಿಂಟನ್, ಕುಸ್ತಿ, ಕಬಡ್ಡಿ, ಅಥ್ಲೆಟಿಕ್ಸ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ.