ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಭಾನುವಾರ ಸಂಭವಿಸಿದ 6.0 ತೀವ್ರತೆಯ ಭೂಕಂಪದಲ್ಲಿ (earthquake) 2,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಕಳೆದ 30 ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಹಾನಿಯಾದ ಪ್ರದೇಶ: ಕುನಾರ್ ಪ್ರಾಂತ್ಯದಲ್ಲಿ ಮಾತ್ರ 2,205 ಜನರು ಮೃತಪಟ್ಟಿದ್ದಾರೆ, 3,600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಂಗರ್ಹಾರ್ ಮತ್ತು ಲಘ್ಮಾನ್ ಪ್ರದೇಶಗಳಲ್ಲಿಯೂ ಸಾವು-ಗಾಯಗಳ ಮಾಹಿತಿ ಬಂದಿದೆ.
ಮತ್ತೊಂದು ಭೂಕಂಪ: ಗುರುವಾರ ರಾತ್ರಿ ಜಲಾಲಾಬಾದ್ ಸಮೀಪ ಮತ್ತೆ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಕಾಬೂಲ್ ಮತ್ತು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲೂ ಕಟ್ಟಡಗಳು ನಡುಗಿವೆ.
ಮನೆ ನಾಶ, ಜನ ಸಂಕಷ್ಟ: ಕುನಾರ್ ಪ್ರಾಂತ್ಯದಲ್ಲಿ 6,700ಕ್ಕೂ ಹೆಚ್ಚು ಮನೆಗಳು ಕುಸಿದು ಹೋಗಿವೆ. ಬದುಕುಳಿದವರು ಆಹಾರ, ನೀರು, ಔಷಧಿ, ತುರ್ತು ನೆರವಿಲ್ಲದೆ ಹತಾಶರಾಗಿದ್ದಾರೆ.
ರಕ್ಷಣಾ ಕಾರ್ಯ: ತಾಲಿಬಾನ್ ಅಧಿಕಾರಿಗಳ ಪ್ರಕಾರ ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಶೋಧ ಕಾರ್ಯದಲ್ಲಿ ನೂರಾರು ಶವಗಳನ್ನು ಅವಶೇಷಗಳಿಂದ ಹೊರತೆಗೆದಿದ್ದಾರೆ.
ಆರೋಗ್ಯ ಸಮಸ್ಯೆ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸ್ಥಳೀಯ ಆರೋಗ್ಯ ಸೇವೆಗಳು ಒತ್ತಡದಲ್ಲಿದ್ದು, ಔಷಧಿ ಮತ್ತು ಸಿಬ್ಬಂದಿ ಕೊರತೆಯಿದೆ. ನೆರವಿಗಾಗಿ 4 ಮಿಲಿಯನ್ ಡಾಲರ್ ನೆರವು ಬೇಡಿಕೆಯಾಗಿದೆ.
ಅಂತಾರಾಷ್ಟ್ರೀಯ ಎಚ್ಚರಿಕೆ: ವಿಶ್ವಸಂಸ್ಥೆಯ ಪ್ರಕಾರ ಈ ಭೂಕಂಪವು ಅರ್ಧ ಮಿಲಿಯನ್ ಜನರ ಜೀವನಕ್ಕೆ ನೇರ ಪರಿಣಾಮ ಬೀರಿದೆ. ಈಗಾಗಲೇ ಬಡತನ, ಬರ ಮತ್ತು ತಾಲಿಬಾನ್ ಆಡಳಿತದ ಪರಿಣಾಮದಿಂದ ದುರ್ಬಲವಾಗಿದ್ದ ದೇಶದಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ.