Kolkata: ಬಹುತೇಕ ವಸ್ತುಗಳ ದರ ಕಡಿತಗೊಂಡಿರುವ GST ಸುಧಾರಣೆಯಿಂದ ಸರ್ಕಾರಕ್ಕೆ ಕನಿಷ್ಠ 3,700 ಕೋಟಿ ರೂ. ಆದಾಯ ನಷ್ಟವಾಗಲಿದೆ ಎಂದು ಎಸ್ಬಿಐ ವರದಿ ಹೇಳಿದೆ.
ಸರ್ಕಾರದ ಅಂದಾಜು ಪ್ರಕಾರ, GST ದರಗಳನ್ನು ಸರಳಗೊಳಿಸಿದ ಪರಿಣಾಮ 48,000 ಕೋಟಿ ರೂ. ನಿವ್ವಳ ಹಣಕಾಸು ಪರಿಣಾಮ ಉಂಟಾಗಲಿದೆ.
ವರದಿ ಪ್ರಕಾರ, ಜನರ ಬಳಕೆ ಮತ್ತು ಆರ್ಥಿಕ ಬೆಳವಣಿಗೆ ಹೆಚ್ಚಾದರೂ ಆರಂಭದಲ್ಲಿ ಕನಿಷ್ಠ ನಷ್ಟ ಉಂಟಾಗುವುದು ಅನಿವಾರ್ಯ. ಆದರೆ ಇದು ಸರ್ಕಾರದ ಹಣಕಾಸಿನ ಕೊರತೆಯಲ್ಲಿ ದೊಡ್ಡ ಪರಿಣಾಮ ಬೀರಲ್ಲ.
ಇತ್ತೀಚಿನ 56ನೇ GST ಮಂಡಳಿ ಸಭೆಯಲ್ಲಿ, ನಾಲ್ಕು ದರಗಳ ಬದಲಾಗಿ 2 ದರ ವ್ಯವಸ್ಥೆ ತಂದಿದ್ದಾರೆ – ಶೇ. 18 ಮತ್ತು ಶೇ. 5. ಕೆಲವು ಸರಕು ಮತ್ತು ಸೇವೆಗಳ ಮೇಲೆ ಶೇ. 40ರಷ್ಟು ಡಿ-ಮೆರಿಟ್ ತೆರಿಗೆ ಅನ್ವಯಿಸುತ್ತದೆ.
ದರ ತರ್ಕಬದ್ಧಗೊಳಿಸುವಿಕೆಯಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ವರದಿ ತಿಳಿಸಿದೆ. ವೆಚ್ಚ ಕಡಿಮೆಯಾಗುವುದರಿಂದ ದೀರ್ಘಕಾಲಿಕವಾಗಿ ಇದು ಲಾಭಕಾರಿ.
2017ರಲ್ಲಿ GST ಆರಂಭವಾದಾಗ ಶೇ. 14.4ರಷ್ಟು ಇದ್ದ ಸರಾಸರಿ ದರ, ಈಗ ಶೇ. 9.5ಕ್ಕೆ ಇಳಿಯುವ ನಿರೀಕ್ಷೆ ಇದೆ.
ಹೊಸ GST ದರಗಳು ಸೆಪ್ಟೆಂಬರ್ 22, ನವರಾತ್ರಿಯ ಮೊದಲ ದಿನದಿಂದ ಜಾರಿಗೆ ಬರಲಿವೆ.
2026–27ರೊಳಗೆ CPI ಹಣದುಬ್ಬರವು 65 ರಿಂದ 75 ಬೇಸಿಸ್ ಪಾಯಿಂಟ್ ಗಳ ಮಟ್ಟದಲ್ಲಿ ಮಧ್ಯಮವಾಗಬಹುದು ಎಂದು SBI ವರದಿ ಹೇಳಿದೆ.








