HomeNewsಸಂಕಷ್ಟಗಳ ನಡುವೆ ಚಿನ್ನದ ಸಾಧನೆ: Rashmita Sahu

ಸಂಕಷ್ಟಗಳ ನಡುವೆ ಚಿನ್ನದ ಸಾಧನೆ: Rashmita Sahu

- Advertisement -
- Advertisement -

ಒಡಿಶಾದ ರಶ್ಮಿತಾ ಸಾಹು (Rashmita Sahu) ಬಾಲ್ಯದಲ್ಲೇ ದೊಡ್ಡ ಸಂಕಷ್ಟವನ್ನು ಎದುರಿಸಿದರು. 2011ರಲ್ಲಿ ಅವರ ತಂದೆ ರಸ್ತೆ ಅಪಘಾತದಲ್ಲಿ ಅಂಗವಿಕಲರಾದರು. ನಾಲ್ಕು ವರ್ಷಗಳ ನಂತರ, ಮತ್ತೊಂದು ಅಪಘಾತದಲ್ಲಿ ತಾಯಿ ಮೃತಪಟ್ಟರು. ಅಂದಿನಿಂದಲೇ ಕುಟುಂಬದ ಎಲ್ಲಾ ಜವಾಬ್ದಾರಿಗಳು ರಶ್ಮಿತಾ ಹೆಗಲಿಗೆ ಬಂದವು.

ರಶ್ಮಿತಾ ಮೂಲತಃ ಮೀನುಗಾರರ ಕುಟುಂಬದವರು. ಬಾಲ್ಯದಲ್ಲಿ ಫುಟ್ಬಾಲ್ ಆಟಗಾರ್ತಿಯಾಗಬೇಕೆಂದು ಕನಸು ಕಂಡಿದ್ದರು. ಆದರೆ ಒಂದು ದಿನ ಸ್ನೇಹಿತರೊಂದಿಗೆ ನದಿಗೆ ಹೋದಾಗ ದೋಣಿ ನೋಡಿ ಆಕರ್ಷಿತರಾದರು. ನಂತರ ಜಲಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂದು ನಿರ್ಧರಿಸಿ, ಜಗತ್ಪುರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಕೇಂದ್ರದಲ್ಲಿ ತರಬೇತಿ ಪಡೆಯಲು ಶುರುಮಾಡಿದರು.

ತಮ್ಮ ಊರಿನ ನದಿಯ ತಟದಲ್ಲಿ ಪ್ರತಿದಿನ 9 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದ ರಶ್ಮಿತಾ, ಸ್ಥಳೀಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪದಕ ಗೆದ್ದರು. ಆ ನಂತರ ಎಲ್ಲೆ ನಡೆದ ಸ್ಪರ್ಧೆಯಲ್ಲೂ ಪದಕಗಳನ್ನು ಗೆಲ್ಲುವುದು ಅವರಿಗೆ ಅಭ್ಯಾಸವಾಯಿತು.

ಇಲ್ಲಿಯವರೆಗೆ ರಶ್ಮಿತಾ ಒಟ್ಟು 41 ಪದಕಗಳು (13 ಚಿನ್ನ, 14 ಬೆಳ್ಳಿ, 14 ಕಂಚು) ಗೆದ್ದಿದ್ದಾರೆ. ಈ ಸಾಧನೆಯಿಂದ ಒಡಿಶಾ ಪೊಲೀಸಿನಲ್ಲಿ ಕಾನ್ಸ್ಟೇಬಲ್ ಹುದ್ದೆ ಸಿಕ್ಕಿತು. ಜೊತೆಗೆ ಭುವನೇಶ್ವರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಓದಲು ಸಹಾಯವಾಯಿತು.

2023ರ ಆಗಸ್ಟ್‌ನಲ್ಲಿ ಶ್ರೀನಗರದಲ್ಲಿ ನಡೆದ ಖೇಲೋ ಇಂಡಿಯಾ ಜಲಕ್ರೀಡಾ ಉತ್ಸವದಲ್ಲಿ ರಶ್ಮಿತಾ ಸಿಂಗಲ್ಸ್ ಹಾಗೂ ಡಬಲ್ಸ್ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದರು. ಈ ಸಾಧನೆಯನ್ನು ಪ್ರಧಾನಿ ಮೋದಿ ಸ್ವತಃ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೆಚ್ಚಿಕೊಂಡರು.

ಮೋದಿ ಅವರ ಪ್ರಶಂಸೆಯ ಬಗ್ಗೆ ರಶ್ಮಿತಾ ಹೇಳಿದರು, ಪದಕಗಳು ನನಗೆ ಸಂತೋಷ ತಂದಿದ್ದರೂ, ಪ್ರಧಾನಿಯವರು ನನ್ನ ಹೆಸರನ್ನು ಹೇಳಿ ಮಾತನಾಡುವುದು ಜೀವನದಲ್ಲೇ ಮರೆಯಲಾರದ ಕ್ಷಣ.”

ತೀವ್ರ ಸಂಕಷ್ಟಗಳನ್ನು ಎದುರಿಸಿ ಯಶಸ್ಸಿನ ಶಿಖರವೇರಿದ ರಶ್ಮಿತಾ ಸಾಹು ಇಂದಿನ ಯುವಕರಿಗೆ ನಿಜವಾದ ಪ್ರೇರಣೆ. “ಸಾಧನೆ ಮಾಡಬೇಕೆಂಬ ಮನಸ್ಸಿದ್ದರೆ ಯಾವುದೇ ಅಡೆತಡೆ ಅಡ್ಡಿಯಾಗುವುದಿಲ್ಲ” ಎಂಬುದಕ್ಕೆ ಅವರು ಜೀವಂತ ಸಾಕ್ಷಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!