Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (Trump) ಭಾರತ ಮತ್ತು ಅಮೆರಿಕದ ನಡುವೆ ವಿಶೇಷ ಸಂಬಂಧವಿದೆ ಎಂದು ಹೇಳಿದ್ದಾರೆ. ಸುಂಕ ಸಮರದ ನಡುವೆಯೂ ಚಿಂತಿಸಬೇಕಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಎರಡು ದಶಕಗಳಲ್ಲೇ ಭಾರತ-ಅಮೆರಿಕ ಸಂಬಂಧಗಳು ಹದಗೆಟ್ಟಿವೆ. “ನಾನು ಮೋದಿಯವರ ಸ್ನೇಹಿತ, ಅವರು ಒಳ್ಳೆಯ ಪ್ರಧಾನಮಂತ್ರಿ. ಆದರೆ ಸದ್ಯ ಅವರ ನಡೆ ನನಗೆ ಇಷ್ಟವಾಗುತ್ತಿಲ್ಲ. ಆದರೂ ನಮ್ಮ ನಡುವಿನ ಸಂಬಂಧ ಬಲವಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ.
ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ಟ್ರಂಪ್ ನಿರಾಶೆ ವ್ಯಕ್ತಪಡಿಸಿದ್ದಾರೆ. “ಭಾರತದ ಮೇಲೆ 50% ಸುಂಕ ಹಾಕಿದ್ದೇವೆ. ನಾನು ಮೋದಿಯವರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದೇನೆ, ಅವರು ಇತ್ತೀಚೆಗೆ ಇಲ್ಲಿಗೆ ಬಂದಿದ್ದರು” ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಪ್ರತಿಕ್ರಿಯಿಸಿ, “ನಾವು ಭಾರತ ಮತ್ತು ರಷ್ಯಾವನ್ನು ಚೀನಾಕ್ಕೆ ಕಳೆದುಕೊಂಡಂತಾಗಿದೆ. ಅವರ ಭವಿಷ್ಯ ಸಮೃದ್ಧವಾಗಿರಲಿ” ಎಂದು ಆಶಿಸಿದ್ದಾರೆ. ಜೊತೆಗೆ ಮೋದಿ, ಪುಟಿನ್ ಮತ್ತು ಕ್ಸಿ ಜಿನ್ಪಿಂಗ್ ಅವರ ಹಳೆಯ ಫೋಟೋ ಹಂಚಿಕೊಂಡಿದ್ದಾರೆ.
“ಭಾರತ ಉತ್ತಮವಾಗಿ ನಡೆದುಕೊಳ್ಳುತ್ತಿದೆ. ನಾವು ಎಲ್ಲರೊಂದಿಗೂ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ಯುರೋಪಿಯನ್ ಒಕ್ಕೂಟದ ಬಗ್ಗೆ ಅಸಮಾಧಾನವಿದೆ” ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಆಡಳಿತದ ಪೀಟರ್ ನವರೊ, “ಭಾರತದ ಹೆಚ್ಚಿದ ಸುಂಕ ಅಮೆರಿಕದ ಉದ್ಯೋಗಗಳಿಗೆ ನಷ್ಟ. ರಷ್ಯಾ ತೈಲ ಖರೀದಿ ಯುದ್ಧಕ್ಕೆ ಬೆಂಬಲ, ಅಮೆರಿಕ ತೆರಿಗೆದಾರರಿಗೆ ಹೆಚ್ಚಿದ ಹೊರೆ” ಎಂದು ಟೀಕಿಸಿದ್ದಾರೆ.