ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆಧಾರ್ ಕಾರ್ಡ್ ಅನ್ನು 12ನೇ ದಾಖಲೆಯಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್ (Supreme Court) ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ಹೇಳಿರುವಂತೆ, ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಬಹುದು. ಅದನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ.
RJD, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಇತರರು ಅರ್ಜಿ ಸಲ್ಲಿಸಿ, ಆಧಾರ್ ಕಾರ್ಡ್ ಅನ್ನು ನಿವಾಸ ಹಾಗೂ ಗುರುತಿನ ದಾಖಲೆ ಎಂದು ಪರಿಗಣಿಸಬೇಕು, ಆದರೆ ಪೌರತ್ವಕ್ಕೆ ಸಂಬಂಧಿಸಿದಂತೆ ಬಳಸಬಾರದು ಎಂದು ಮನವಿ ಮಾಡಿದ್ದರು.
ಚುನಾವಣಾ ಆಯೋಗದ ಪರ ವಕೀಲರು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆಧಾರ್ ಕಾರ್ಡ್ ಗುರುತಿಗಾಗಿ ಮಾತ್ರ ಬಳಸಲಾಗುತ್ತದೆ ಎಂದರು. ಪಾಸ್ಪೋರ್ಟ್ ಅಥವಾ ಜನನ ಪ್ರಮಾಣಪತ್ರದಂತೆ ಇದು ಪೌರತ್ವದ ದಾಖಲೆಯಲ್ಲ ಎಂದೂ ಸ್ಪಷ್ಟಪಡಿಸಿದರು.
- ಸುಪ್ರೀಂ ಕೋರ್ಟ್ ಆದೇಶ
- ಆಧಾರ್ ಕಾರ್ಡ್ ಅನ್ನು 12ನೇ ದಾಖಲೆಯಾಗಿ ಸೇರಿಸಬೇಕು.
- ಅದರ ನೈಜತೆ ಮತ್ತು ದೃಢೀಕರಣವನ್ನು ಅಧಿಕಾರಿಗಳು ಪರಿಶೀಲಿಸಬೇಕು.
ಈ ನಿರ್ಧಾರವನ್ನು ತನ್ನ website ನಲ್ಲಿ ಪ್ರಕಟಿಸಲು ಇಸಿಐಗೆ ಸೂಚನೆ ನೀಡಲಾಗಿದೆ.