back to top
26.6 C
Bengaluru
Tuesday, September 16, 2025
HomeIndiaNepal Protests–ಟಿಬೆಟ್‌ನಲ್ಲಿ ಸಿಲುಕಿದ ಭಾರತೀಯ ಯಾತ್ರಾರ್ಥಿಗಳಿಗೆ ಸಹಾಯ

Nepal Protests–ಟಿಬೆಟ್‌ನಲ್ಲಿ ಸಿಲುಕಿದ ಭಾರತೀಯ ಯಾತ್ರಾರ್ಥಿಗಳಿಗೆ ಸಹಾಯ

- Advertisement -
- Advertisement -

New Delhi: ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ (Nepal Protests) ಪ್ರತಿಭಟನೆಗಳ ನಡುವೆ ಟಿಬೆಟ್‌ನಲ್ಲಿ ಸಿಲುಕಿರುವ ಕೈಲಾಸ ಮಾನಸರೋವರ ಯಾತ್ರಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ತೆರೆಯಲಾಗಿದೆ. ಬೀಜಿಂಗ್‌ನಲ್ಲಿರುವ ರಾಯಭಾರ ಕಚೇರಿ ತನ್ನ ಅಧಿಕೃತ X  ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

ನೇಪಾಳದ ಗಡಿಯಲ್ಲಿ ಉಂಟಾದ ಅಶಾಂತಿ ಟಿಬೆಟ್‌ಗೆ ಹೋಗುವ ಮಾರ್ಗವನ್ನು ತಡೆಯುತ್ತಿದೆ. ಇದರಿಂದಾಗಿ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಪ್ರಯಾಣಿಸುತ್ತಿರುವ ಭಾರತೀಯ ಯಾತ್ರಾರ್ಥಿಗಳಿಗೆ ಭದ್ರತಾ ಆತಂಕ ಎದುರಾಗಿದೆ. ರಾಯಭಾರ ಕಚೇರಿ ಎಲ್ಲಾ ಪ್ರಯಾಣಿಕರಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಿದೆ.

  • ತುರ್ತು ಪರಿಸ್ಥಿತಿಯಲ್ಲಿ ಸಹಾಯ ಪಡೆಯಲು ಈ ಸಂಖ್ಯೆಗಳು ಲಭ್ಯ
  • ಬೀಜಿಂಗ್ ರಾಯಭಾರ ಕಚೇರಿ: 0086 185 1428 4905 (ಕರೆ) ಮತ್ತು 0086 135 2065 7602 (WhatsApp)
  • ಕಠ್ಮಂಡು ರಾಯಭಾರ ಕಚೇರಿ: +977 980 860 2881, +977 981 032 6134 (WhatsApp)

ನೇಪಾಳ ಸರ್ಕಾರ ಹಠಾತ್ 26 ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಷೇಧ ಹೇರಿದ ಬಳಿಕ ಪ್ರತಿಭಟನೆಗಳು ಭುಗಿಲೆದ್ದಿವೆ. ಸರ್ಕಾರದ ಭ್ರಷ್ಟಾಚಾರ ಹಾಗೂ ಮಾತಿನ ಸ್ವಾತಂತ್ರ್ಯದ ಮೇಲೆ ದಮನವನ್ನು ವಿರೋಧಿಸಿ ಯುವಕರು ಬೀದಿಗಿಳಿದಿದ್ದಾರೆ. ಇದರಿಂದ ಫೆಡರಲ್ ಪಾರ್ಲಿಮೆಂಟ್ ಸೇರಿದಂತೆ ಹಲವಾರು ಸರ್ಕಾರಿ ಕಟ್ಟಡಗಳಲ್ಲಿ ಘರ್ಷಣೆಗಳು ನಡೆದಿವೆ.

ಪ್ರತಿಭಟನೆಗಳಲ್ಲಿ ಇದುವರೆಗೆ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಸರ್ಕಾರಿ ಕಟ್ಟಡಗಳು ಮತ್ತು ರಾಜಕೀಯ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಸಾರ್ವಜನಿಕ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಮಧ್ಯಂತರ ಸರ್ಕಾರದ ಮುಖ್ಯಸ್ಥೆಯಾಗಿಯಾಗಿ ಸುಶೀಲಾ ಕರ್ಕಿ ಅವರನ್ನು ನೇಮಿಸಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page