New Delhi: ಭಾರತದ ವ್ಯಾಪಾರ ನೀತಿಯನ್ನು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವಾರ್ಡ್ ಲುಟ್ನಿಕ್ (US Commerce Secretary Howard Lutnick) ತೀವ್ರವಾಗಿ ಟೀಕಿಸಿದ್ದಾರೆ.
ಅವರು ಹೇಳಿದ್ದಾರೆ, “ಭಾರತ 140 ಕೋಟಿ ಜನರ ದೇಶ ಅಂತ ಹೆಮ್ಮೆಪಡುತ್ತದೆ. ಆದರೆ ನಮ್ಮಿಂದ ಒಂದು ಬುಟ್ಟಿ ಜೋಳವೂ (corn) ಕೊಳ್ಳೋದಿಲ್ಲ. ಎಲ್ಲದರಿಗೂ ಸುಂಕ ಹಾಕುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಿಮ್ಮ ಸುಂಕವನ್ನು ಕಡಿಮೆ ಮಾಡಿ. ನಾವು ನಿಮ್ಮನ್ನು ಹೇಗೆ ನಡೆಸುತ್ತೇವೆಯೋ, ಹಾಗೆಯೇ ನಮ್ಮನ್ನೂ ನಡೆಸಿಕೊಳ್ಳಿ. ಇಲ್ಲದಿದ್ದರೆ ನಮ್ಮ ಮೇಲೆ ಟ್ಯಾರಿಫ್ ಮುಂದುವರಿಯುತ್ತದೆ” ಎಂದು ಎಚ್ಚರಿಸಿದರು.
ಭಾರತ ತನ್ನ ಕೃಷಿ ಕ್ಷೇತ್ರವನ್ನು ಮುಕ್ತಗೊಳಿಸಲು ಸಮ್ಮತಿಸದಿರುವುದು ಅಮೆರಿಕದ ಅಸಮಾಧಾನದ ಪ್ರಮುಖ ಕಾರಣವಾಗಿದೆ. ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕಾಗಿ ಹಲವು ಮಾತುಕತೆಗಳಾದರೂ ಅಂತಿಮಗೊಳ್ಳದ ಕಾರಣ ಅಮೆರಿಕ ಭಾರತಕ್ಕೆ ಶೇ.50ರಷ್ಟು ಟ್ಯಾರಿಫ್ ಹಾಕಿದೆ.