
ಭಾರತದಲ್ಲಿ ಮಾರುತಿ ಸುಜುಕಿಯ ಕಾರುಗಳನ್ನು ಸಾಮಾನ್ಯವಾಗಿ ಮೈಲೇಜ್ ಮತ್ತು ಉಪಯುಕ್ತತೆಗೆ ಹೆಚ್ಚು ಮೆಚ್ಚುತ್ತಾರೆ. ಆದರೆ ಸುರಕ್ಷತೆಯ ವಿಚಾರದಲ್ಲಿ ಹಿಂದುಳಿದಿವೆ ಎಂಬ ಟೀಕೆಗಳು ಇತ್ತು. ಈಗ ಆ ಮಾತಿಗೆ ವಿಕ್ಟೋರಿಸ್ SUV (Maruti Suzuki’s Victoris SUV) ಸಂಪೂರ್ಣ ವಿರಾಮ ಹಾಕಿದೆ.
- ಗ್ಲೋಬಲ್ NCAP ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಈ ಕಾರು 5-ಸ್ಟಾರ್ ರೇಟಿಂಗ್ ಗಳಿಸಿದೆ.
- ವಯಸ್ಕರ ರಕ್ಷಣಾ ಅಂಕ: 33.72/34
- ಮಕ್ಕಳ ರಕ್ಷಣಾ ಅಂಕ: 44.1/49
- ಮುಂಭಾಗದ ಡಿಕ್ಕಿ ಟೆಸ್ಟ್: 15.66/16
- ಸೈಡ್ ಇಂಪ್ಯಾಕ್ಟ್ ಟೆಸ್ಟ್: 16/16
- ಡೈನಾಮಿಕ್ ಟೆಸ್ಟ್: 24/24
- ಚೈಲ್ಡ್ ರೆಸ್ಟ್ರೈನ್ ಸಿಸ್ಟಮ್: 12/12
ಇವುಗಳಿಂದ ವಿಕ್ಟೋರಿಸ್ SUV ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸುವುದನ್ನು ಸಾಬೀತುಪಡಿಸಿದೆ.
ಅದೇ ರೀತಿ, ಈ SUVಯಲ್ಲಿ 6 ಏರ್‌ಬ್ಯಾಗ್‌ಗಳು, ABS-EBD, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯಗಳಿವೆ. ಜೊತೆಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸಹ ನೀಡಲಾಗಿದೆ. ಮಕ್ಕಳಿಗಾಗಿ ISOFIX ಸೀಟ್ ಆಂಕರ್‌ಗಳೂ ಒದಗಿಸಲಾಗಿದೆ.
ವಿಕ್ಟೋರಿಸ್ SUV ಯಶಸ್ಸಿನಿಂದ ಮಾರುತಿ ಸುಜುಕಿ “ಮೈಲೇಜ್ ಬ್ರಾಂಡ್” ಅಷ್ಟೇ ಅಲ್ಲ, “ಸುರಕ್ಷತಾ ನಾಯಕ” ಆಗಿಯೂ ಹೊರಹೊಮ್ಮುವ ಸಾಧ್ಯತೆ ಇದೆ.