ಮೈಕ್ರೋಸಾಫ್ಟ್ ಅಕ್ಟೋಬರ್ 14ರಿಂದ ವಿಂಡೋಸ್ 10ಗೆ ಫ್ರೀ ಸೆಕ್ಯೂರಿಟಿ updates ಮತ್ತು ಟೆಕ್ನಾಲಜಿ ಬೆಂಬಲವನ್ನು ನಿಲ್ಲಿಸುತ್ತಿದೆ. ಈ ನಿರ್ಧಾರದಿಂದ ಪ್ರಪಂಚದ ಲಕ್ಷಾಂತರ ಬಳಕೆದಾರರು ಸೈಬರ್ ಬೆದರಿಕೆಗಳಿಗೆ ಸಿಲುಕಬಹುದು.
ಕನ್ಸ್ಯೂಮರ್ ರಿಪೋರ್ಟ್ಸ್ ಮೈಕ್ರೋಸಾಫ್ಟ್ ಸಿಇಒಗೆ ಪತ್ರ ಬರೆದಿದ್ದು, ಹಳೆಯ ಕಂಪ್ಯೂಟರ್ ಗಳ ಬಳಕೆದಾರರು ವಿಂಡೋಸ್ 11ಗೆ update ಮಾಡಲಾಗದ ಕಾರಣ ಅಪಾಯಕ್ಕೆ ಸಿಲುಕಬಹುದು ಎಂದು ಎಚ್ಚರಿಸಿದೆ.
ನಿಗದಿತ ದಿನಾಂಕದ ನಂತರ, ಬಳಕೆದಾರರು ತಮ್ಮ ಕಂಪ್ಯೂಟರ್ ಗಳ ಭದ್ರತೆಗಾಗಿ ಹಣ ಪಾವತಿಸಬೇಕಾಗುತ್ತದೆ. ಅಂದಾಜು ಪ್ರಕಾರ, 2025ರ ಆಗಸ್ಟ್‌ಗಿಂತ ಮೊದಲು ಪ್ರಪಂಚದ 46.2% ಜನರು ಇನ್ನೂ ವಿಂಡೋಸ್ 10 ಬಳಸುತ್ತಿದ್ದಾರೆ.
ಕನ್ಸ್ಯೂಮರ್ ರಿಪೋರ್ಟ್ಸ್ ಮೈಕ್ರೋಸಾಫ್ಟ್ ಕ್ರಮವನ್ನು ‘ಬೂಟಾಟಿಕೆ’ ಎಂದು ಟೀಕಿಸಿ, ಗ್ರಾಹಕರನ್ನು ಅಪ್ಗ್ರೇಡ್ ಮಾಡಲು ಒತ್ತಾಯಿಸುತ್ತಿದೆ. ಕೇವಲ ವರ್ಷಕ್ಕೊಂದು 30 ಡಾಲರ್ ಶುಲ್ಕವನ್ನು ವಿಧಿಸುವುದನ್ನು ಸಂಸ್ಥೆ ಪ್ರಶ್ನಿಸಿದೆ.
ಪಬ್ಲಿಕ್ ಇಂಟ್ರೆಸ್ಟ್ ರಿಸರ್ಚ್ ಗ್ರೂಪ್ (PIRG) ಅಂದಾಜಿಸುವಂತೆ, ವಿಂಡೋಸ್ 11ಗೆ updates ಮಾಡದ 400 ಮಿಲಿಯನ್ ಕಂಪ್ಯೂಟರ್ ಗಳನ್ನು ತ್ಯಜಿಸಬಹುದು. ಇದರಿಂದ ಇ-ತ್ಯಾಜ್ಯ ಹೆಚ್ಚಳ ಮತ್ತು ಹಳೆಯ ಹಾರ್ಡ್ವೇರ್ ಮೇಲೆ ಪರಿಣಾಮ ಉಂಟಾಗುತ್ತದೆ.
ಈ ನಿರ್ಧಾರದಿಂದ ಬಳಕೆದಾರರ ಭದ್ರತೆ, ಹಳೆಯ ಕಂಪ್ಯೂಟರ್ ಗಳ ಬಳಕೆ ಮತ್ತು ಸೈಬರ್ ಸುರಕ್ಷತೆ ಕುರಿತಾಗಿ ಸಾಕಷ್ಟು ಆತಂಕ ಹೆಚ್ಚಾಗಿದೆ.







