ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು (PV Sindhu) ದಕ್ಷಿಣ ಕೊರಿಯಾದ ಅಹ್ನ್ ಸೆ-ಯಂಗ್ ವಿರುದ್ಧ 14-21, 13-21 ಅಂಕೆಗಳಲ್ಲಿ ಸೋಲನ್ನು ಕಂಡಿದ್ದಾರೆ.
ಶೆನ್ಜೆನ್‌ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ, ವಿಶ್ವದ ನಂಬರ್ 1 ಆಟಗಾರ್ತಿ ಅಹ್ನ್ ಸೆ-ಯಂಗ್ ಆರಂಭದಿಂದಲೇ ಉತ್ತಮ ಆಟ ತೋರಿಸಿದರು. ಮೊದಲ ಸೆಟ್ 21-14 ರಿಂದ ಗೆದ್ದು ಸಿಂಧುಗೆ ದೊಡ್ಡ ಸೋಲು ನೀಡಿದರು. ಎರಡನೇ ಸೆಟ್‌ನಲ್ಲಿ ಸಹ ಅಹ್ನ್ ಸೆ-ಯಂಗ್ ಉತ್ತಮ ಆಟವಾಡಿ 21-13 ರಿಂದ ಗೆದ್ದರು.
ಇದರೊಂದಿಗೆ ಪಿ.ವಿ. ಸಿಂಧು ಚೈನಾ ಮಾಸ್ಟರ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಇದು ಸಿಂಧು ಅವರ 8ನೇ ಸೋಲು, ಭಾರತೀಯ ಅಭಿಮಾನಿಗಳಿಗೆ ನಿರಾಸೆ ತಂದಿದೆ.
ನಿನ್ನೆ ಪುರುಷರ ಡಬಲ್ಸ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ, ಭಾರತೀಯ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ತೈವಾನ್ನ ಸಿಯು ಹ್ಸಿಯಾಂಗ್ ಚಿಹ್ ಮತ್ತು ವಾಂಗ್ ಚಿ-ಲಿನ್ ವಿರುದ್ಧ ಗೆಲುವು ಸಾಧಿಸಿದರು.
ಮೊದಲ ಸೆಟ್ 21-13 ಮತ್ತು ಎರಡನೇ ಸೆಟ್ 21-12 ಅಂಕೆಗಳಿಂದ ಗೆದ್ದು, ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಇಂದು ಚೀನಾದ ಹೈ ಹೊನಾನ್ ಮತ್ತು ರೆನ್ ಕ್ಸಿಂಗ್ ಯು ವಿರುದ್ಧ ಅವರ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಭಾರತೀಯ ಜೋಡಿ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ಗೆ ಮುನ್ನಡೆಯುವ ನಿರೀಕ್ಷೆ ಹೊಂದಿದ್ದಾರೆ.