Bengaluru: ಭಾರತದ ಪ್ರತಿಭಾ ಶಕ್ತಿಗೆ ಮೋಹಗೊಂಡಿರುವ ಅಮೆರಿಕದ ನ್ಯೂಜೆರ್ಸಿ ರಾಜ್ಯ ಈಗ ಬೆಂಗಳೂರಿನತ್ತ ಗಮನ ಹರಿಸಿದೆ. ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳಿವೆ, ಬನ್ನಿ ಬಂಡವಾಳ ಹೂಡಿ ಎಂದು ನ್ಯೂಜೆರ್ಸಿ ಸರ್ಕಾರ ಆಹ್ವಾನ ನೀಡಿದೆ.
ಬೆಂಗಳೂರಿನಲ್ಲಿ ಗವರ್ನರ್ ಫಿಲ್ ಮರ್ಫಿ ನೇತೃತ್ವದ ನಿಯೋಗ ಮತ್ತು ಕರ್ನಾಟಕ ಸರ್ಕಾರದ ನಡುವೆ ಮಹತ್ವದ ಒಡಂಬಡಿಕೆ ಕೂಡ ಕೈಗೊಂಡಿದೆ.
ಇತ್ತೀಚೆಗೆ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಮೇಲೆ ಹಿಂಸಾಚಾರ ಹೆಚ್ಚಾಗಿದೆ. ಈ ಬಗ್ಗೆ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ, ನ್ಯೂಜೆರ್ಸಿ ಗವರ್ನರ್ ಮರ್ಫಿ ದಂಪತಿ ಭದ್ರತೆ ಬಗ್ಗೆ ವಿಶ್ವಾಸ ನೀಡಿದ್ದಾರೆ.
ಅಮೆರಿಕದ ಟ್ರಂಪ್ ಸರ್ಕಾರ ಭಾರತಕ್ಕೆ ಶೇ.50 ಸುಂಕ ಹೇರಿದರೂ, ಹೆಚ್1ಬಿ ವೀಸಾ ಶುಲ್ಕ ಹೆಚ್ಚಿಸಿದರೂ, ಇದು ತಾತ್ಕಾಲಿಕವೆಂದು ಹೇಳಲಾಗಿದೆ. ಉಭಯ ದೇಶಗಳು ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಿವೆ.
ಹೀಗಾಗಿ ಯಾವುದೇ ಭಯವಿಲ್ಲದೆ ನ್ಯೂಜೆರ್ಸಿಗೆ ಬಂದು ಬಂಡವಾಳ ಹೂಡಿ, ಉತ್ತಮ ಗುಣಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಿರಿ ಎಂದು ನ್ಯೂಜೆರ್ಸಿ ಸರ್ಕಾರ ಕರ್ನಾಟಕದವರಿಗೆ ಮುಕ್ತ ಆಹ್ವಾನ ನೀಡಿದೆ.







