Delhi: ಪ್ರಧಾನಿ ನರೇಂದ್ರ ಮೋದಿ ಅವರ ಸ್ವದೇಶಿ ಕರೆ ಹಿನ್ನೆಲೆಯಲ್ಲಿ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಲ್ಲಾ ಡಿಜಿಟಲ್ ದಾಖಲೆಗಳನ್ನು ಸ್ವದೇಶಿ ವೇದಿಕೆ ಜೊಹೊಗೆ ಬದಲಾಯಿಸುತ್ತಿದ್ದಾರೆ.
Spreadsheets, ಪ್ರಸ್ತುತಿಗಳು ಸೇರಿದಂತೆ ಎಲ್ಲಾ ಕೆಲಸಕ್ಕಾಗಿ ಜೊಹೊ ಬಳಸುತ್ತಿದ್ದಾರೆ. ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳು ಮತ್ತು ಸೇವೆಗಳನ್ನು ಆಯ್ಕೆ ಮಾಡಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಅವರು ವೈಷ್ಣವ್ ಅವರಿಗೆ ಧನ್ಯವಾದ ಸಲ್ಲಿಸಿ, “ಎಂಜಿನಿಯರ್ ಗಳು 20 ವರ್ಷಗಳ ಶ್ರಮದಿಂದ ನಿರ್ಮಿಸಿರುವ ಉತ್ಪನ್ನಕ್ಕೆ ಇದು ದೊಡ್ಡ ಪ್ರೋತ್ಸಾಹ. ನಿಮ್ಮ ಬೆಂಬಲದಿಂದ ನಾವೀಗ ಹೆಮ್ಮೆಪಡುತ್ತೇವೆ” ಎಂದು ತಿಳಿಸಿದ್ದಾರೆ.
ವಿದೇಶಿ ಸಾಫ್ಟ್‌ವೇರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಸ್ವದೇಶಿ ತಂತ್ರಜ್ಞಾನವನ್ನು ಉತ್ತೇಜಿಸುವ ಭಾಗವಾಗಿ ಈ ಕ್ರಮ ಎಲ್ಲರ ಗಮನ ಸೆಳೆದಿದೆ.
ಜೊಹೊ ಎಂದರೆ ಏನು
- ಸ್ಥಾಪನೆ: ತಮಿಳುನಾಡಿನಲ್ಲಿ ಕೇಂದ್ರ ಕಚೇರಿ, 1996ರಲ್ಲಿ ಐಐಟಿ ಪದವೀಧರರು ವೆಂಬು ಮತ್ತು ಟೋನಿ ಥಾಮಸ್ ಸ್ಥಾಪನೆ
- ಬದಲಾವಣೆ: 2009 ರಲ್ಲಿ ಜೊಹೊ ಕಾರ್ಪೊರೇಷನ್ ಆಗಿ ಪರಿವರ್ತನೆ
- ಸಾಧನೆ: Online ಆಫೀಸ್ ಸೂಟ್, ನಂತರ 55 ಕ್ಕೂ ಹೆಚ್ಚು ಕ್ಲೌಡ್ ಆಧಾರಿತ ವ್ಯವಹಾರ ಅಪ್ಲಿಕೇಶನ್ ಗಳು
ನವರಾತ್ರಿಯಂದು ಪ್ರಧಾನಿ ಮೋದಿ ದೇಶದ ಜನರಿಗೆ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡುವಂತೆ ಕರೆ ನೀಡಿದ್ದಾರೆ. ಅದೇ ಸಮಯದಲ್ಲಿ ಅಶ್ವಿನಿ ವೈಷ್ಣವ್ ಈ ಕ್ರಮವನ್ನು ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.








