Washington: ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ ನಲ್ಲಿ 90 ಅಡಿ ಎತ್ತರದ ಹನುಮಂತನ ಭಾರಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದನ್ನು ಸ್ಟ್ಯಾಚ್ಯೂ ಆಫ್ ಯೂನಿಯನ್ ಎಂದು ಕರೆಯಲಾಗುತ್ತದೆ. ಆದರೆ, ಟೆಕ್ಸಾಸ್ ನ ರಿಪಬ್ಲಿಕ್ ಪಕ್ಷದ ನಾಯಕರೊಬ್ಬರು ಹನುಮಂತನನ್ನು ಟೀಕಿಸಿ ಹೊಸ ವಿವಾದವನ್ನು ಹುಟ್ಟಿಸಿದ್ದಾರೆ. ಅವರು “ನಮ್ಮದು ಕ್ರಿಶ್ಚಿಯನ್ ರಾಷ್ಟ್ರ, ಆದರೆ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು ಇಲ್ಲೇಕೆ ನಿರ್ಮಿಸಲು ಅನುಮತಿ ನೀಡಲಾಗಿದೆ?” ಎಂದು ಪ್ರಶ್ನಿಸಿದ್ದಾರೆ.
ಸ್ಥಳೀಯ ರಿಪಬ್ಲಿಕನ್ ನಾಯಕ ಮತ್ತು ಸೆನೆಟ್ ಅಭ್ಯರ್ಥಿ ಅಲೆಕ್ಸಾಂಡರ್ ಡಂಕನ್ ಅವರ ಹೇಳಿಕೆ ಹಿಂದೂ ಸಮುದಾಯ ಮತ್ತು ಇತರರ ಭಾವನೆಗಳಿಗೆ ನೋವುಂಟು ಮಾಡಿದೆ. ಅವರು ಶುಗರ್ ಲ್ಯಾಂಡ್ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಹನುಮಂತರೊಂದಿಗೆ ಇರುವ ವಿಗ್ರಹದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ್ದಾರೆ.
ಅಲೆಕ್ಸಾಂಡರ್ ಡಂಕನ್ ಅವರ ಹೇಳಿಕೆ ತಕ್ಷಣವೇ online ನಲ್ಲಿ ಟೀಕೆಗೆ ಗುರಿಯಾಗಿದೆ. ಹಿಂದೂ ಅಮೆರಿಕನ್ ಫೌಂಡೇಶನ್ (HAF) ಇದನ್ನು ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ ಎಂದು ಕರೆದು, ರಿಪಬ್ಲಿಕನ್ ಪಕ್ಷದ ವಿರುದ್ಧ ದೂರು ನೀಡಿದೆ.
ಡಂಕನ್ ಟೆಕ್ಸಾಸ್ ನ ರಿಪಬ್ಲಿಕನ್ ಪಕ್ಷದ ಸದಸ್ಯರಾಗಿದ್ದು, 2026 ರ ಯು.ಎಸ್. ಸೆನೆಟ್ ಚುನಾವಣೆಗೆ ಅಭ್ಯರ್ಥಿ. ಅವರು ಕ್ರಿಶ್ಚಿಯನ್ ಮತ್ತು ಸಂಪ್ರದಾಯವಾದಿ, ರಾಷ್ಟ್ರೀಯವಾದಿ ಎಂಬ ಧೋರಣೆ ಹೊಂದಿದ್ದಾರೆ.
ಈ ವಿವಾದ ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುತ್ತದೆ ಎಂದು ಸಂಘಟನೆಗಳು ಹೇಳಿದ್ದಾರೆ. 90 ಅಡಿ ಎತ್ತರ, 90 ಟನ್ ತೂಕದ ಕಂಚಿನ ಈ ಪ್ರತಿಮೆ 2024 ರ ಆಗಸ್ಟ್‌ನಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಉದ್ಘಾಟನೆಯಾಗಿದೆ. ಇದು ಭಕ್ತಿ, ಶಕ್ತಿ ಮತ್ತು ಏಕತೆಯನ್ನು ಸಂಕೇತಿಸುತ್ತದೆ ಮತ್ತು ಹನುಮಂತನ ರಾಮ-ಸೀತೆ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ.
ಈ ವೃತ್ತಾಂತವು ಭಾರತ-ಅಮೆರಿಕ ಸಂಬಂಧಗಳಲ್ಲಿಯೂ ಕೆಲವು ಕುತಂತ್ರಗಳಿಗೆ ಕಾರಣವಾಗಿದೆ, ಮತ್ತು ಆ ಸಮಯದಲ್ಲಿ ರಿಪಬ್ಲಿಕನ್ ಪಕ್ಷದ ನಾಯಕ ಈ ರೀತಿಯಾಗಿ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.