ಆಮ್ಸ್ಟರ್ಡ್ಯಾಮ್ ಮೂಲದ TPV ಕಂಪನಿಯು ಫಿಲಿಪ್ಸ್ (Philips ) ಬ್ರ್ಯಾಂಡ್ ಅಡಿಯಲ್ಲಿ ಭಾರತದ ಮಾರುಕಟ್ಟೆಗೆ ಮೂರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಫಿಲಿಪ್ಸ್ TAT1269 TWS headset, ಫಿಲಿಪ್ಸ್ TAS3400 ಬ್ಲೂಟೂತ್ ಸ್ಪೀಕರ್ ಮತ್ತು ಫಿಲಿಪ್ಸ್ TAX4910 ಪಾರ್ಟಿ ಸ್ಪೀಕರ್ ಸೇರಿವೆ. ಈ ಎಲ್ಲ ಸಾಧನಗಳೂ ಆಧುನಿಕ ಗ್ರಾಹಕರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಂಡಿವೆ ಎಂದು ಕಂಪನಿ ತಿಳಿಸಿದೆ.
ಫಿಲಿಪ್ಸ್ TAT1269 TWS headset ರೂ. 1,999ಗೆ ಲಭ್ಯವಿದೆ. ಡೀಪ್ ಬ್ಲ್ಯಾಕ್ ಮತ್ತು ಬ್ರೈಟ್ ವೈಟ್ ಬಣ್ಣಗಳಲ್ಲಿ ಲಭ್ಯವಿರುವ ಈ ಇಯರ್ ಬಡ್ ಗಳಲ್ಲಿ ಬ್ಲೂಟೂತ್ 5.4 ಸಂಪರ್ಕ, 13mm ಕಾಂಪೋಸಿಟ್ ಡ್ರೈವರ್ ಮತ್ತು ಸ್ಪಷ್ಟ ಹೈಸ್ ಮತ್ತು ಶಕ್ತಿಯುತ ಬಾಸ್ ದೊರಕುತ್ತದೆ. ಬ್ಯಾಟರಿ ಶಕ್ತಿಯು ಕೇಸ್ನೊಂದಿಗೆ ಒಟ್ಟು 40 ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ ಮತ್ತು ಕೇವಲ 10 ನಿಮಿಷಗಳ ತ್ವರಿತ ಚಾರ್ಜ್ನಿಂದ 100 ನಿಮಿಷಗಳ ಬ್ಯಾಟರಿ ಬಾಳಿಕೆ ಪಡೆಯಬಹುದು. IPX5 ಜಲನಿರೋಧಕ ಹಾಗೂ ಸ್ಪರ್ಶ ನಿಯಂತ್ರಣಗಳು, ಧ್ವನಿ ಸಹಾಯಕ ಬೆಂಬಲ ಸುಲಭ ಬಳಕೆಯನ್ನು ಖಚಿತಪಡಿಸುತ್ತವೆ.
ಫಿಲಿಪ್ಸ್ TAS3400 ಬ್ಲೂಟೂತ್ ಸ್ಪೀಕರ್ ರೂ. 5,999 ಬೆಲೆಗೆ ಲಭ್ಯವಿದ್ದು, 40W ಧ್ವನಿ output ನೀಡುತ್ತದೆ. ಪೋರ್ಟಬಲ್ ವಿನ್ಯಾಸದ ಈ ಸ್ಪೀಕರ್ ಬ್ಲೂಟೂತ್, AUX, TF ಕಾರ್ಡ್ ಮತ್ತು USB ಸಂಪರ್ಕ ಆಯ್ಕೆಗಳನ್ನು ಹೊಂದಿದೆ. IPX5 ಸ್ಪ್ಲಾಶ್ ರೆಸಿಸ್ಟೆನ್ಸ್, 10 ಗಂಟೆಗಳ ಬ್ಯಾಟರಿ ಶಕ್ತಿ ಮತ್ತು ಅಂತರ್ನಿರ್ಮಿತ ಮೈಕ್ರೊಫೋನ್ ಇದನ್ನು ಹೊರಾಂಗಣ ಬಳಕೆಗೆ ಸೂಕ್ತ ಮಾಡುತ್ತದೆ.
ಫಿಲಿಪ್ಸ್ TAX4910 ಪಾರ್ಟಿ ಸ್ಪೀಕರ್ ರೂ. 19,999 ಬೆಲೆಗೆ ಲಭ್ಯವಿದೆ. 120W ಶಕ್ತಿ, ಡ್ಯುಯಲ್ 6.5 ಇಂಚಿನ ವೂಫರ್, ಟ್ವೀಟರ್, ಟ್ರೂ ವೈರ್‌ಲೆಸ್ ಸ್ಟೀರಿಯೋ ತಂತ್ರಜ್ಞಾನ, ಕರೋಕೆ ಬೆಂಬಲ, 10 ಗಂಟೆಗಳ ಬ್ಯಾಟರಿ ಶಕ್ತಿ ಮತ್ತು ಡೈನಾಮಿಕ್ ಪಾರ್ಟಿ ಲೈಟ್ಸ್ ಪಾರ್ಟಿ ಅನುಭವವನ್ನು ಹೆಚ್ಚಿಸುತ್ತವೆ.
ಈ ಮೂರು ಉತ್ಪನ್ನಗಳು ವಿಭಿನ್ನ ಆಡಿಯೋ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಳ್ಳಿದ್ದು, TPV ತಂತ್ರಜ್ಞಾನವು ಫಿಲಿಪ್ಸ್ ಬ್ರ್ಯಾಂಡ್ ಮೌಲ್ಯವನ್ನು ಭಾರತೀಯ ಗ್ರಾಹಕರಿಗೆ ಒದಗಿಸುತ್ತದೆ.







