back to top
21.1 C
Bengaluru
Monday, October 27, 2025
HomeIndia75 ಲಕ್ಷ ಮಹಿಳೆಯರಿಗೆ 7,500 ಕೋಟಿ ರೂ.; ಬಿಹಾರದ ಮಹಿಳಾ ರೋಜಗಾರ್ ಯೋಜನೆಗೆ ಪ್ರಧಾನಿ ಚಾಲನೆ

75 ಲಕ್ಷ ಮಹಿಳೆಯರಿಗೆ 7,500 ಕೋಟಿ ರೂ.; ಬಿಹಾರದ ಮಹಿಳಾ ರೋಜಗಾರ್ ಯೋಜನೆಗೆ ಪ್ರಧಾನಿ ಚಾಲನೆ

- Advertisement -
- Advertisement -

Delhi: ಪ್ರಧಾನಿ ನರೇಂದ್ರ ಮೋದಿ ಇಂದು ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆಗೆ ಚಾಲನೆ ನೀಡಿದ್ದಾರೆ. ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಬಹುನಿರೀಕ್ಷಿತ ಯೋಜನೆಯ ಉದ್ಘಾಟನೆ ನೆರವೇರಿತು. ಯೋಜನೆಯ ಮೊದಲ ಹಂತದಲ್ಲಿ 75 ಲಕ್ಷ ಮಹಿಳೆಯರಿಗೆ 7,500 ಕೋಟಿ ರೂ. ಹಣ ನೀಡಲಾಗಿದೆ. ಪ್ರತಿಯೊಬ್ಬ ಫಲಾನುಭವಿ ಮಹಿಳೆಯ ಬ್ಯಾಂಕ್ ಖಾತೆಗೆ 10,000 ರೂ. ನೇರವಾಗಿ ವರ್ಗಾವಣೆ ಮಾಡಲಾಗಿದೆ.

ಪ್ರಧಾನಿಯವರು ಕೆಲವು ಫಲಾನುಭವಿ ಮಹಿಳೆಯರ ಜೊತೆ ಸಂಭಾಷಣೆ ನಡೆಸಿದರು. ಪ್ರಧಾನಿಯೇ ಮಾತನಾಡಿರುವುದನ್ನು ಕಂಡು ಮಹಿಳೆಯರು ಭಾವನಾತ್ಮಕವಾಗಿ ಪರವಶರಾದರು. ಹಲವರು ಅವರನ್ನು ಪ್ರೀತಿಯಿಂದ ‘ಅಣ್ಣಾ’ ಎಂದು ಸಂಬೋಧಿಸಿ ಮಾತನಾಡಿದರು. ಮಹಿಳೆಯರು ಈ ಯೋಜನೆಯ ಮೂಲಕ ತಮ್ಮ ಜೀವನದಲ್ಲಿ ಏನು ಮಾಡಲಿದ್ದಾರೋ, ಮತ್ತು ಕೇಂದ್ರ ಸರ್ಕಾರದ ಇತರ ಯೋಜನೆಗಳು ಅವರ ಜೀವನದಲ್ಲಿ ಎಷ್ಟು ಬದಲಾವಣೆ ತಂದಿದ್ದಾವೆಯೋ ವಿವರಿಸಿದರು.

ಭೋಜಪುರ್ ರಿಂದ ಸಣ್ಣ ಕೋಳಿಫಾರ್ಮ್ ನಡೆಸುತ್ತಿರುವ ರೀತಾ ದೇವಿ, “ನನ್ನ ಜೀವನ ಬದಲಾಗಿದೆ. ಈಗ 10,000 ರೂ. ಸಿಕ್ಕರೆ ಇನ್ನೂ ನೂರು ಕೋಳಿಗಳನ್ನು ಖರೀದಿಸುತ್ತೇನೆ. ಚಳಿಗಾಲದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ನನಗೆ ಆದಾಯವೂ ಹೆಚ್ಚುತ್ತದೆ,” ಎಂದು ಹೇಳಿದ್ದಾರೆ. ಅವರು ಕೇಂದ್ರ ಸರ್ಕಾರದ ಇತರ ಯೋಜನೆಗಳ ಪ್ರಯೋಜನಗಳನ್ನೂ ಹಂಚಿಕೊಂಡರು. “ಪಿಎಂ ಆವಾಸ್ ಯೋಜನೆಯಿಂದ ಉತ್ತಮ ಮನೆ ಮತ್ತು ಶೌಚಾಲಯ ಕಟ್ಟಿಕೊಳ್ಳಲು ಸಾಧ್ಯವಾಯಿತು. ಈಗ ಕುಡಿಯಲು ಸ್ವಚ್ಛ ನೀರು, ಉಜ್ವಲ ಗ್ಯಾಸ್ ಬಳಕೆ, ಆಯುಷ್ಮಾನ್ ಕಾರ್ಡ್ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ, 125 ಯೂನಿಟ್ ಉಚಿತ ವಿದ್ಯುತ್ ನನ್ನ ಜೀವನವನ್ನು ಉಜ್ವಲಗೊಳಿಸಿದೆ. ಉಳಿಸಿದ ಹಣವನ್ನು ಮಕ್ಕಳ ಭವಿಷ್ಯ ಕಟ್ಟಲು ಬಳಸುತ್ತಿದ್ದೇವೆ,” ಎಂದು ಹರ್ಷದಿಂದ ಹೇಳಿದರು.

ಮುಖ್ಯಮಂತ್ರಿ ರೋಜಗಾರ್ ಯೋಜನೆಯಡಿ ಸ್ವಂತ ಉದ್ಯೋಗ ಆರಂಭಿಸಿದ ಮಹಿಳೆಯರಿಗೆ ಪ್ರಾರಂಭದಲ್ಲಿ 10,000 ರೂ. ಧನಸಹಾಯ ನೀಡಲಾಗುತ್ತದೆ. ಯಶಸ್ವಿಯಾಗಿ ವ್ಯವಹಾರವನ್ನು ವಿಸ್ತರಿಸಲು 2 ಲಕ್ಷ ರೂ.ವರೆಗೂ ಸಹಾಯ ದೊರೆಯುತ್ತದೆ. ಈ ಯೋಜನೆಯಿಂದ ಹಲವಾರು ಮಹಿಳೆಯರಿಗೆ ಹೊಸ ಭರವಸೆ ಮೂಡಿದೆ. ಪುತುಲ್ ದೇವಿ, “ನನಗೆ ಎರಡು ಲಕ್ಷ ರೂ. ಸಿಕ್ಕಾಗ ನನ್ನ ವ್ಯವಹಾರವನ್ನು ವಿಸ್ತರಿಸುತ್ತೇನೆ. ಜನರು ನನ್ನನ್ನು ನೋಡುತ್ತಿದ್ದರು, ಆದರೆ ಜೀವಿಕಾ ಸೇರಿದ ಬಳಿಕ ಎಲ್ಲವೂ ಬದಲಾಗಿದೆ. 125 ಯೂನಿಟ್ ಉಚಿತ ವಿದ್ಯುತ್ ಸಿಗುತ್ತಿದೆ. ಉಳಿಸಿದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page