ಸೆಪ್ಟೆಂಬರ್ 27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ BSNL ಸ್ವದೇಶಿ 4G ‘network stack’ ಅನ್ನು ಉದ್ಘಾಟಿಸಿದ್ದಾರೆ. ಈ ಸಾಧನೆಯೊಂದಿಗೆ ಭಾರತವು ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ ಮತ್ತು ಚೀನಾದಂತೆ ಸ್ವಂತ ಟೆಲಿಕಾಂ ಸಾಧನಗಳನ್ನು ತಯಾರಿಸುವ ದೇಶಗಳ ಸಾಲಿನಲ್ಲಿ ಸೇರಿದೆ. ಈ 4G ‘network stack’ ಭಾರತದ ಟೆಲಿಕಾಂ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲಾಗಲಿದೆ.
ಒಡಿಶಾದ ಜಾರ್ಸುಗುಡದಲ್ಲಿ ಪ್ರಧಾನಿ ಮೋದಿ 97,500ಕ್ಕೂ ಹೆಚ್ಚು 4G ಮೊಬೈಲ್ ಟವರ್ ಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರಲ್ಲಿ 92,600ಕ್ಕೂ ಹೆಚ್ಚು ಟವರ್ ಗಳನ್ನು ಬಿಎಸ್ಎನ್ಎಲ್ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಈ ಟವರ್ ಗಳು 5Gಗೆ ನವೀಕರಿಸಬಹುದಾದ ಸಾಮರ್ಥ್ಯ ಹೊಂದಿದ್ದು, ಭಾರತವು ಕಡಿಮೆ ದರದ ಕರೆ ಮತ್ತು internet ಸೇವೆ ನೀಡುವ ದೇಶವಾಗಿಯೇ ಅಲ್ಲ, ಸ್ವಂತವಾಗಿ ಟೆಲಿಕಾಂ ಉಪಕರಣಗಳನ್ನು ತಯಾರಿಸುವ ದೇಶವನ್ನಾಗಿ ಹೊರಹೊಮ್ಮಿದೆ.
4G ‘network stack’ ವೈಶಿಷ್ಟ್ಯಗಳು
- ಬಿಎಸ್ಎನ್ಎಲ್ ಹೊಸ 4G ನೆಟ್ವರ್ಕ್ ಸ್ಟಾಕ್‌ನಲ್ಲಿ ಪ್ರಮುಖ ಅಂಶಗಳು,
- ರೇಡಿಯೋ ಆಕ್ಸೆಸ್ ನೆಟ್ವರ್ಕ್ (RAN) – ಟೆಜಾಸ್ ನೆಟ್ವರ್ಕ್ ಅಭಿವೃದ್ಧಿಪಡಿಸಿದೆ
- ಕೋರ್ network– ಸಿ-ಡಾಟ್ ಅಭಿವೃದ್ಧಿಪಡಿಸಿದೆ
- ಇಂಟಿಗ್ರೇಷನ್ – ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಿರ್ವಹಿಸಿದೆ
ಸುಮಾರು 26,700 ಸಂಪರ್ಕ ರಹಿತ ಹಳ್ಳಿಗಳಲ್ಲಿ ಡಿಜಿಟಲ್ ಭಾರತ ನಿಧಿ ಸ್ಯಾಚುರೇಶನ್ ಯೋಜನೆಯಡಿ 14,180 ಟವರ್ ಗಳನ್ನು ನಿರ್ಮಿಸಲಾಗಿದೆ. BSNL ಜೊತೆಗೆ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಮತ್ತು ಭಾರತಿ ಏರ್ಟೆಲ್ 4,700ಕ್ಕೂ ಹೆಚ್ಚು 4G ಟವರ್ ಗಳನ್ನು ಸ್ಥಾಪಿಸಿದ್ದಾರೆ. ಈ ಟವರ್ ಗಳು 20 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರಿಗೆ ಸೇವೆ ನೀಡಲಿವೆ. ಹೊಸ ಟವರ್ ಗಳಿಂದ ಆನ್ ಲೈನ್ ಶಿಕ್ಷಣ, ಇ-ಆಡಳಿತ, ಡಿಜಿಟಲ್ ಪಾವತಿ ಸೇರಿದಂತೆ ಹಲವಾರು ಸೇವೆಗಳು ಸುಗಮವಾಗಲಿವೆ.







