ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದಕ್ಷಿಣ ಅಮೆರಿಕದ ನಾಲ್ಕು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಯಲ್ಲಿ ಅವರು ಅಲ್ಲಿನ ರಾಜಕೀಯ ಮುಖಂಡರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಪವನ್ ಖೇರಾ ತಿಳಿಸಿದ್ದಾರೆ.
ಪವನ್ ಖೇರಾ ಸಾಮಾಜಿಕ ಜಾಲತಾಣದಲ್ಲಿ ಈ ಪ್ರವಾಸ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಬ್ರೆಜಿಲ್ ಮತ್ತು ಕೊಲಂಬಿಯಾಗೆ ಭೇಟಿ ನೀಡಲಿದ್ದು, ಅಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ಅನೇಕರ ಅಧ್ಯಕ್ಷರು ಮತ್ತು ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ಪ್ರಜಾಪ್ರಭುತ್ವ ಮತ್ತು ಕಾರ್ಯತಂತ್ರ ಸಂಬಂಧಗಳನ್ನು ಬಲಪಡಿಸಲಿದ್ದಾರೆ.
ಅಮೆರಿಕದ ಸುಂಕ ಏರಿಕೆ ಹಿನ್ನೆಲೆ, ಭಾರತದ ವ್ಯಾಪಾರ ಮತ್ತು ಪಾಲುದಾರಿಕೆಗಳನ್ನು ವೈವಿಧ್ಯಗೊಳಿಸಲು ರಾಹುಲ್ ಗಾಂಧಿ ಉದ್ಯಮಿಗಳು ಮತ್ತು ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅವರು ಮುಂದಿನ ಪೀಳಿಗೆಯ ಜಾಗತಿಕ ನಾಯಕರೊಂದಿಗೆ ಸಂವಾದ ನಡೆಸಿ, ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಕಲ್ಪಿಸುತ್ತಿದ್ದಾರೆ.
ಭಾರತ ಮತ್ತು ದಕ್ಷಿಣ ಅಮೆರಿಕಾ ದೇಶಗಳು ದೀರ್ಘಕಾಲದಿಂದ ಒಗ್ಗಟ್ಟಿನ ಬಂಧ ಹೊಂದಿವೆ. ರಾಹುಲ್ ಗಾಂಧಿಯವರ ಸಂಪರ್ಕವು ವ್ಯಾಪಾರ, ತಂತ್ರಜ್ಞಾನ, ಸುಸ್ಥಿರತೆ ಮತ್ತು ಜನರಿಂದ ಜನರಿಗೆ ವಿನಿಮಯದಲ್ಲಿ ಸಹಕಾರದ ಹೊಸ ಮಾರ್ಗಗಳನ್ನು ತೆರೆದೀತು. ಅಂತಾರಾಷ್ಟ್ರೀಯ ಪಾಲುದಾರಿಕೆ ರೂಪಿಸುವಲ್ಲಿ ಮತ್ತು ಭಾರತದ ಜಾಗತಿಕ ಉಪಸ್ಥಿತಿಯನ್ನು ಮುನ್ನಡೆಸುವಲ್ಲಿ ಇದು ಭಾರತಕ್ಕೆ ಅಗತ್ಯ ಪಾತ್ರವನ್ನುವಹಿಸುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ.







