back to top
26.3 C
Bengaluru
Wednesday, October 29, 2025
HomeNewsಸೂರ್ಯಕುಮಾರ್ ಯಾದವ್ ಮತ್ತು ಹ್ಯಾರಿಸ್ ರೌಫ್ ಮೇಲೆ ದಂಡ ವಿಧಿಸಿದ ICC

ಸೂರ್ಯಕುಮಾರ್ ಯಾದವ್ ಮತ್ತು ಹ್ಯಾರಿಸ್ ರೌಫ್ ಮೇಲೆ ದಂಡ ವಿಧಿಸಿದ ICC

- Advertisement -
- Advertisement -

ಏಷ್ಯಾಕಪ್ ಟೂರ್ನಿಯ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆಯ ಕಾರಣದಿಂದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನಿ ಆಟಗಾರ ಹ್ಯಾರಿಸ್ ರೌಫ್ ಅವರಿಗೆ ಪಂದ್ಯ ಶುಲ್ಕದ 30% ದಂಡ ವಿಧಿಸಲಾಗಿದೆ. ಲೀಗ್ ಹಂತದ ಪಂದ್ಯದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹ್ಯಾಂಡ್ಶೇಕ್ ಮಾಡದೆ ಇದ್ದು, ಸೂಪರ್ 4 ಹಂತದ ಪಂದ್ಯದಲ್ಲಿ ಮಾತಿನ ಚಕಮಕಿಗೆ ಕಾರಣವಾಯಿತು.

ಸಾಹಿಬ್ಜಾದಾ ಫರ್ಹಾನ್ ಅರ್ಧಶತಕ ಸಿಡಿಸಿ ಸಂಭ್ರಮಾಚರಣೆ, ಹ್ಯಾರಿಸ್ ರೌಫ್ ಅವರ “6-0” ಸನ್ನೆ ಮತ್ತು ಹ್ಯಾರಿಸ್ ರೌಫ್-ಅಭಿಷೇಕ್ ಶರ್ಮಾ ನಡುವಿನ ಮಾತಿನ ಚಕಮಕಿ ವಿವಾದಕ್ಕೆ ಕಾರಣವಾಯಿತು. ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದೂರುಗಳ ನಂತರ ಸೆಪ್ಟೆಂಬರ್ 25 ರಂದು ಐಸಿಸಿ ಈ ಪ್ರಕರಣದ ವಿಚಾರಣೆ ನಡೆಸಿತು.

ವಿಚಾರಣೆಯ ವೇಳೆ ಆಟಗಾರರು ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡರೂ, ಐಸಿಸಿ ನಿಯಮ ಉಲ್ಲಂಘನೆಯ ಮಟ್ಟ ಲೆವೆಲ್ 1 ಎಂದು ಕಂಡುಬಂದಿತು. ಇದರ ಪರಿಣಾಮವಾಗಿ ಸೂರ್ಯಕುಮಾರ್ ಯಾದವ್ ಮತ್ತು ಹ್ಯಾರಿಸ್ ರೌಫ್ ಇಬ್ಬರಿಗೂ 30% ಶೇಕಡಾ ದಂಡ ವಿಧಿಸಲ್ಪಟ್ಟಿದ್ದು, ಸಾಹಿಬ್ಜಾದಾ ಫರ್ಹಾನ್ ಅವರಿಗೆ ಕೇವಲ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭ, ನಾಳೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯ ಭಾರತೀಯ ಕಾಲಮಾನದಲ್ಲಿ ರಾತ್ರಿ 8 ಗಂಟೆಗೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page