HomeBusiness11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ Accenture

11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ Accenture

- Advertisement -
- Advertisement -

New Delhi: ವಿಶ್ವದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಅಕ್ಸೆಂಚರ್ ತನ್ನ 11,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. ಕಳೆದ ಮೂರು ತಿಂಗಳಿಂದ ವಿಶ್ವಾದ್ಯಂತ ಇರುವ ವಿವಿಧ ಕಚೇರಿಗಳಲ್ಲಿ ಕೆಲಸದಿಂದ ಈ ಉದ್ಯೋಗಿಗಳನ್ನು ತೆಗೆದುಹಾಕಲಾಗಿದೆ. ಕಂಪನಿಯ ಆದಾಯ ಏರಿದಿದ್ದರೂ, ಕಾರ್ಪೊರೇಟ್ ಬೇಡಿಕೆ ಕಡಿಮೆ ಆಗಿರುವುದು ಮತ್ತು ಎಐ ತಂತ್ರಜ್ಞಾನದ ಅಳವಡಿಕೆ ಹೆಚ್ಚಿರುವುದು ಈ ಲೇ ಆಫ್ ಗೆ ಕಾರಣವೆಂದು ತಿಳಿದು ಬಂದಿದೆ.

ಅಕ್ಸೆಂಚರ್ ಸಿಇಒ ಜೂಲೀ ಸ್ವೀಟ್ ಅವರು ಈ ಲೇ ಆಫ್ ಅನಿವಾರ್ಯತೆಯನ್ನು ವಿವರಿಸಿದ್ದಾರೆ. ಕಂಪನಿಗೆ ಬೇಕಾದ ಕೌಶಲ್ಯಗಳಿಗಾಗಿ ಎಲ್ಲಾ ಉದ್ಯೋಗಿಗಳನ್ನು ರೀಸ್ಕಿಲ್ಲಿಂಗ್ ಮಾಡುವುದು ಸಾಧ್ಯವಾಗಿಲ್ಲ. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳಿಗೆ ಅನುವಾಗಿ ಎಲ್ಲಾ ಉದ್ಯೋಗಿಗಳು ತ್ವರಿತವಾಗಿ ಅಳವಡಿಕೊಳ್ಳಲಾಗುವುದಿಲ್ಲ. ಈ ಕಾರಣದಿಂದ, ಕೆಲ ಉದ್ಯೋಗಿಗಳಿಗೆ ಕಂಪನಿ ಹೊರಗಿನ ದಾರಿ ತೋರಿಸಿದೆ.

2025ರ ಜೂನ್‌ನಲ್ಲಿ ಅಕ್ಸೆಂಚರ್‌ನ ಒಟ್ಟೂ ಉದ್ಯೋಗಿಗಳ ಸಂಖ್ಯೆ 7,91,000 ಇತ್ತು. ಆಗಸ್ಟ್‌ ಕೊನೆಯಲ್ಲಿ ಇದು 7,79,000ಕ್ಕೆ ಇಳಿದಿದೆ. ಲೇ ಆಫ್ ಪ್ರಕ್ರಿಯೆ ಇನ್ನೂ ಮುಗಿಯದಿರುವುದಾಗಿ, ನವೆಂಬರ್ ವರೆಗೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.

ಈ ಲೇ ಆಫ್ ಮೂಲಕ ಅಕ್ಸೆಂಚರ್ ಸುಮಾರು ಒಂದು ಬಿಲಿಯನ್ ಡಾಲರ್ ಉಳಿತಾಯ ಮಾಡುವ ನಿರೀಕ್ಷೆ ಇದೆ. ಜೊತೆಗೆ, ಎಐ ಪ್ರಾಜೆಕ್ಟ್‌ಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಪ್ರತಿಭೆಗಳನ್ನು ಉಳಿಸಲು ಮತ್ತು ಹೊಸ ಎಐ ಸಾಧನಗಳಲ್ಲಿ ಕೌಶಲ್ಯಮರುಪೂರಣ ಮತ್ತು ಅಪ್ಸ್ಕಿಲ್ಲಿಂಗ್ ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!