
ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದ ಗುತ್ತಿಗೆದಾರರು, ಈಗ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗುತ್ತಿಗೆದಾರರ ಸಮಸ್ಯೆಗಳಿಗೆ ಕಿವಿಗೊಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ಗುತ್ತಿಗೆದಾರರಿಗೆ 33 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹಲವು ಸಭೆಗಳಾದರೂ, ಸಮಸ್ಯೆ ಬಗೆಹರಿಯದೆ ಗುತ್ತಿಗೆದಾರರಿಗೆ ನಿರಾಸೆಯಾಗಿದೆ.
ಗುತ್ತಿಗೆದಾರರ ಪತ್ರದ ಪ್ರಮುಖ ಅಂಶಗಳು
- ಹಿಂದಿನ ಸರ್ಕಾರಕ್ಕಿಂತ ಈಗ ಕಮಿಷನ್ ದುಪ್ಪಟ್ಟು ಆಗಿದೆ.
- 8 ಇಲಾಖೆಯಿಂದ ಬಾಕಿ ಹಣ ಬಿಡುಗಡೆ ಆಗಿಲ್ಲ.
- ಪಾರದರ್ಶಕತೆ ಕಾಯ್ದುಕೊಳ್ಳಲಾಗಿಲ್ಲ.
- ಬಾಕಿ ಹಣವನ್ನು 15-20% ಮಾತ್ರ ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡುತ್ತಿದ್ದಾರೆ.
- 2017 ರಿಂದ 2021ರ ವರೆಗೆ ಜಿಎಸ್‌ಟಿ ಹೆಚ್ಚುವರಿ ಮೊತ್ತ ಪಾವತಿಯಾಗಿಲ್ಲ.
- ಖನಿಜ ಮತ್ತು ಭೂ ವಿಜ್ಞಾನ ಇಲಾಖೆ ಅವೈಜ್ಞಾನಿಕ ದಂಡ ವಿಧಿಸುತ್ತಿದೆ.
- ಕೆಲ ಇಲಾಖೆಗಳು ಟೆಂಡರ್‌ಗಳನ್ನು ಬಲಿಷ್ಠ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಬದಲಾಯಿಸುತ್ತಿವೆ.
- ಜನಪ್ರತಿನಿಧಿಗಳ ಅನುಯಾಯಿಗಳಿಗೆ ಮರುಗುತ್ತಿಗೆ ನೀಡುವ ಅನ್ಯಾಯ ನಡೆದುಕೊಂಡಿದೆ.
ಅನೇಕ ಬಾರಿ ಪತ್ರ ಬರೆದರೂ ಸಮಸ್ಯೆ ಬಗೆಹರಿಯದೆ ಉಳಿದಿದೆ. ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದು, ಗುತ್ತಿಗೆದಾರರೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚುನಾವಣೆಗೂ ಮೊದಲು ಗುತ್ತಿಗೆದಾರರನ್ನು ಹೊಗಳಿದ ಕಾಂಗ್ರೆಸ್, ಈಗ ಅವರ ಆಕ್ರೋಶವನ್ನು ರಾಜಕೀಯವೆಂದು ತಳ್ಳಿ ಹಾಕುತ್ತಿದೆ.