Search
WhatsApp alerts

Home › News

ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತದ ನ್ಯಾಯ ವಾಗ್ದಾಳಿ

administrator · Published

Parvathaneni Harish

ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ವಾಗ್ದಾಳಿ ನಡೆಸಿದೆ. ಪಾಕಿಸ್ತಾನ ತನ್ನಲೇ ಜನರ ಮೇಲೆ ಬಾಂಬ್ ಹಾಕಿ, 4 ಲಕ್ಷ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಸಾಮೂಹಿಕ ಅತ್ಯಾಚಾರ ಮಾಡಿದೆ ಎಂದು ಭಾರತ ಹೇಳಿದೆ.

ಭಾರತದ ಸ್ಥಿರ ಪ್ರತಿನಿಧಿ ಪರ್ವತನೇನಿ ಹರೀಶ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮಹಿಳೆಯರು, ಶಾಂತಿ ಮತ್ತು ಭದ್ರತೆ ಕುರಿತ ಚರ್ಚೆಯಲ್ಲಿ, 1971ರಲ್ಲಿ ಪಾಕಿಸ್ತಾನವು “Operation Searchlight” ನಡೆಸಿ, ಪೂರ್ವ ಪಾಕಿಸ್ತಾನದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದುದನ್ನು ವಿವರಿಸಿದರು.

ಅವರು ಹೇಳಿದ್ದು, ಪಾಕಿಸ್ತಾನ ತನ್ನದೇ ನಾಗರಿಕರನ್ನು ಸರಿಯಾಗಿ ನೋಡಿಕೊಳ್ಳಲಾಗದ ದೇಶವಾಗಿದ್ದು, ಈ ವರ್ಷ ಭಾರತ ಮತ್ತು ಜಮ್ಮು-ಕಾಶ್ಮೀರ ಕುರಿತು ಅರ್ಥವಿಲ್ಲದ ಟೀಕೆಗಳನ್ನು ಮಾಡುತ್ತದೆ. ಇಂತಹ ಅಪಪ್ರಚಾರದಿಂದ ಜಗತ್ತಿನ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.

ಭಾರತದ ವಾಗ್ದಾಳಿ: ಭಾರತದಲ್ಲಿ ಮಹಿಳೆಯರ ರಕ್ಷಣೆ, ಶಕ್ತಿ ವೃದ್ಧಿ ಮತ್ತು ಶಾಂತಿ ಸಾಧನೆಗೆ ಬದ್ಧವಾಗಿದೆ. ತನ್ನದೇ ನಾಗರಿಕರ ಮೇಲೆ ಬಾಂಬ್ ಹಾಕಿ ಸಾಮೂಹಿಕ ಅತ್ಯಾಚಾರಕ್ಕೆ ಅವಕಾಶ ನೀಡಿದ ಪಾಕಿಸ್ತಾನ, ಈ ವಿಷಯದಲ್ಲಿ ಪ್ರಶ್ನೆ ಕೇಳಲು ಹಕ್ಕಿಲ್ಲ.

ಪಾಕಿಸ್ತಾನದ ಪ್ರತಿನಿಧಿಯ ಕಾಶ್ಮೀರಿ ಮಹಿಳೆಯರ ಮೇಲೆ ಆರೋಪಕ್ಕೆ ಭಾರತ ಸ್ಪಷ್ಟವಾಗಿ ಉತ್ತರ ನೀಡಿತು. ಜಾಗತಿಕ ಶಾಂತಿಗೆ ಭಾರತ ಯಾವಾಗಲೂ ಬದ್ಧವಾಗಿದ್ದು, ಮಹಿಳೆಯರನ್ನು ಶಾಂತಿಯ ಧೂತರು ಎಂದು ಗುರುತಿಸುತ್ತದೆ.

1971ರ ಮಾರ್ಚ್ 25ರಂದು ಪಾಕಿಸ್ತಾನ ನಡೆಸಿದ Operation Searchlight ವೇಳೆ 4 ಲಕ್ಷಕ್ಕೂ ಅಧಿಕ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page