Stockholm (Sweden): ಈ ವರ್ಷದ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಸ್ಟಾಕ್ಹೋಮ್‌ನ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಘೋಷಿಸಿದೆ. ಅಮೆರಿಕದ ವಿಜ್ಞಾನಿಗಳು ಜಾನ್ ಕ್ಲಾರ್ಕ್, ಮೈಕೆಲ್ ಹೆಚ್.ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಪ್ರಶಸ್ತಿ ವಿಜೇತರು ಸೂಪರ್ ಕಂಡಕ್ಟರ್ ಬಳಸಿ ವಿಶೇಷ ವಿದ್ಯುತ್ ಸರ್ಕ್ಯೂಟ್ ರಚನೆ ಮಾಡಿದ್ದಾರೆ. ಈ ಸರ್ಕ್ಯೂಟ್‌ನಲ್ಲಿ ಯಾವುದೇ ಪ್ರತಿರೋಧವಿಲ್ಲದೆ ವಿದ್ಯುತ್ ಹರಿಯುತ್ತದೆ. ಈ ಪ್ರಯೋಗದಲ್ಲಿ ಅವರು ಎರಡು ಪ್ರಮುಖ ಕ್ವಾಂಟಮ್ ಪರಿಣಾಮಗಳನ್ನು ಕಂಡುಹಿಡಿದರು.
ಕ್ವಾಂಟಮ್ ವಿಧಾನ ಎಂದರೆ ಏನು?: ಕ್ವಾಂಟಮ್ ವಿಧಾನವೆಂದರೆ, ಒಂದು ಕಣವು ನಿರ್ದಿಷ್ಟ ತಡೆಗೋಡೆಯ ಮೂಲಕ ನೇರವಾಗಿ ಚಲಿಸುವುದು. ಸಾಮಾನ್ಯವಾಗಿ ಹೆಚ್ಚಿನ ಕಣಗಳಿದ್ದಾಗ ಈ ಪರಿಣಾಮ ಬಹಳ ಕಡಿಮೆಯಾಗುತ್ತದೆ. ಈ ವಿಜ್ಞಾನಿಗಳು ಕೈಯಲ್ಲಿ ಹಿಡಿದಿಡಬಹುದಾದ ಸರ್ಕ್ಯೂಟ್‌ನಲ್ಲಿ ಈ ಕ್ವಾಂಟಮ್ ಪರಿಣಾಮವನ್ನು ಪ್ರಾಯೋಗಿಕವಾಗಿ ತೋರಿಸಿದ್ದಾರೆ.
- ನೊಬೆಲ್ ಪ್ರಶಸ್ತಿ ಕುರಿತು ಕೆಲವು ಅಂಕಿ-ಅಂಶಗಳು
- 1901 ರಿಂದ 2024 ರವರೆಗೆ ಭೌತಶಾಸ್ತ್ರದಲ್ಲಿ 118 ನೊಬೆಲ್ ಪ್ರಶಸ್ತಿಗಳು ನೀಡಲಾಗಿದೆ.
- ಒಟ್ಟು 227 ವಿಜ್ಞಾನಿಗಳು ಈ ಪ್ರಶಸ್ತಿ ಪಡೆದಿದ್ದಾರೆ.
- 1903 ರಲ್ಲಿ ಮೇರಿ ಕ್ಯೂರಿ ಸೇರಿದಂತೆ ಐವರು ಮಹಿಳೆಯರು ಪ್ರಶಸ್ತಿ ಪಡೆದಿದ್ದಾರೆ.
- 2024 ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಜಾನ್ ಹಾಪ್ಫೀಲ್ಡ್ ಮತ್ತು ಜೆಫ್ರಿ ಹಿಂಟನ್ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.
- ವೈದ್ಯಕೀಯ ನೊಬೆಲ್ ಪ್ರಶಸ್ತಿ ಮೂರು ವಿಜ್ಞಾನಿಗಳಿಗೆ
- ಮೇರಿ ಇ.ಬ್ರಾಂಕೋವ್ (ಅಮೆರಿಕಾ, 64),
- ಫ್ರೆಡ್ ರಾಮ್ಸ್ಡೆಲ್ (ಅಮೆರಿಕಾ, 63),
- ಷಿಮೊನ್ ಸಕಾಗುಚಿ (ಜಪಾನ್, 74)
ಇವರು ಬಾಹ್ಯ ರೋಗನಿರೋಧಕ ಸಹಿಷ್ಣುತೆ ಕುರಿತ ಸಂಶೋಧನೆಗಾಗಿ ಪ್ರಶಸ್ತಿ ಪಡೆದಿದ್ದಾರೆ. ಇವರ ಸಂಶೋಧನೆ ಕ್ಯಾನ್ಸರ್ ಮತ್ತು ಆಟೋ ಇಮ್ಯೂನ್ ಕಾಯಿಲೆಗಳಿಗೆ ಹೊಸ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಗೆ ಸಹಾಯವಾಗಿದೆ.
ಪ್ರಶಸ್ತಿ ವಿಜೇತರಿಗೆ ಡಿಪ್ಲೊಮಾ, ಚಿನ್ನದ ಪದಕ ಮತ್ತು 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 10.38 ಕೋಟಿ ರೂ.) ನೀಡಲಾಗುತ್ತದೆ.