ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ರಸ (ginger juice) ಕುಡಿಯುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಲಾಭಗಳಿವೆ. ಶುಂಠಿಯಲ್ಲಿರುವ ನೈಸರ್ಗಿಕ ಸಂಯುಕ್ತಗಳು, ಉರಿಯೂತ ತಗ್ಗಿಸುವ ಅಂಶಗಳು, ಜಿಂಜರಾಲ್ ಗಳು ಮತ್ತು ಶೋಗೋಲ್ ದೇಹಕ್ಕೆ ಉತ್ತಮ. ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಗಳಲ್ಲಿ ಶತಮಾನಗಳಿಂದ ಶುಂಠಿಯನ್ನು ಜೀರ್ಣಕ್ಕಾಗಿ, ಉರಿಯೂತ ನಿವಾರಣೆಗೆ, ವಾಕರಿಕೆ ಕಡಿಮೆ ಮಾಡಲು ಉಪಯೋಗಿಸುತ್ತಾರೆ.
ಅಜೀರ್ಣ, ಹೊಟ್ಟೆ ಉಬ್ಬರಿಕೆ ಮತ್ತು ವಾಕರಿಕೆ ಕಡಿಮೆ ಮಾಡುತ್ತದೆ: ಶುಂಠಿಯಲ್ಲಿರುವ ಜಿಂಜರಾಲ್ಗಳು ಆಹಾರ ಜೀರ್ಣತೆಯನ್ನು ಸುಧಾರಿಸುತ್ತವೆ. ಹೊಟ್ಟೆ ಉಬ್ಬುವುದು, ಅಜೀರ್ಣ, ವಾಕರಿಕೆ ಕಡಿಮೆ ಮಾಡುತ್ತದೆ. ಗರ್ಭಾವಸ್ಥೆ, ಕ್ಯಾನ್ಸರ್ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ನಂತರ ಉಂಟಾಗುವ ವಾಕರಿಕೆಯನ್ನು ಸಹ ಕಡಿಮೆ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಶುಂಠಿಯು ಬ್ಯಾಕ್ಟೀರಿಯಾ, ವೈರಸ್ ಮತ್ತು ಉರಿಯೂತವನ್ನು ತಡೆಯುತ್ತದೆ. ಇದು ಬಿಳಿ ರಕ್ತಕಣಗಳ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ನಿಂಬೆ ಅಥವಾ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ವಿಟಮಿನ್ ಸಿ ದೊರೆತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಶೀತ, ಉಸಿರಾಟದ ಸೋಂಕುಗಳು ಕಡಿಮೆ ಆಗುತ್ತವೆ.
ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡ ತಗ್ಗಿಸುತ್ತದೆ: ಶುಂಠಿಯಲ್ಲಿರುವ ಜಿಂಜರಾಲ್ ಗಳು, ಶೋಗೋಲ್ ಮತ್ತು ಉತ್ಕರ್ಷಣ ನಿರೋಧಕಗಳು ಉರಿಯೂತದ ಗುರುತುಗಳನ್ನು ಕಡಿಮೆ ಮಾಡುತ್ತವೆ. ಇದು ಸಂಧಿವಾತ, ಹೃದ್ರೋಗ, ಟೈಪ್ 2 ಮಧುಮೇಹದಂತಹ ಕಾಯಿಲೆಗಳಲ್ಲಿ ಸಹ ಪ್ರಯೋಜನಕಾರಿಯಾಗಿದೆ.
ಹೃದಯ ಆರೋಗ್ಯಕ್ಕೆ ಉತ್ತಮ: ಕೆಟ್ಟ ಕೊಲೆಸ್ಟ್ರಾಲ್ (LDL) ಮತ್ತು ಟ್ರೈಗ್ಲಿಸರೈಡ್ ಕಡಿಮೆ, ಉತ್ತಮ ಕೊಲೆಸ್ಟ್ರಾಲ್ (HDL) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಹೃದಯ ಕಾಯಿಲೆ ಅಪಾಯವನ್ನು ಕಡಿಮೆ ಮಾಡುತ್ತದೆ.
ರಕ್ತದಲ್ಲಿ ಸಕ್ಕರೆ ನಿಯಂತ್ರಣ: ನಿಯಮಿತ ಶುಂಠಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಮೆಟಬಾಲಿಕ್ ಸಿಂಡ್ರೋಮ್ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕ ನಷ್ಟ ಮತ್ತು ಚಯಾಪಚಯ ಕ್ರಿಯೆಗೆ ಒಳ್ಳೆಯದು: ಶುಂಠಿ ರಸ ದೇಹದಲ್ಲಿ ಶಾಖ ಉತ್ಪತ್ತಿ ಮಾಡುತ್ತದೆ, ಹಸಿವು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಕೊಬ್ಬು ಕರಗಲು ಸಹಾಯ ಮಾಡುತ್ತದೆ.
ಮನಸ್ಥಿತಿ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ: ಶುಂಠಿಯು ರಕ್ತ ಹರಿವನ್ನು ಉತ್ತಮಗೊಳಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ, ಮೆದುಳಿನ ಆರೋಗ್ಯ ಉತ್ತಮಗೊಳಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.
ಸೂಚನೆ: ಈ ಮಾಹಿತಿಯು ಸಾಮಾನ್ಯ ಅರಿವುಗಾಗಿ ನೀಡಲಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಚಿಂತೆಯಾಗಿದ್ದರೆ ಅಥವಾ ಈ ವಿಧಾನವನ್ನು ಅನುಸರಿಸಲು ಇಚ್ಛಿಸಿದರೆ, ತಜ್ಞ ವೈದ್ಯರನ್ನು ಸಂಪರ್ಕಿಸಿ.