New Delhi : ಮುಂದಿನ ತಿಂಗಳು ನಡೆಯಲಿರುವ Bihar ವಿಧಾನಸಭಾ ಚುನಾವಣೆಗಾಗಿ NDA ಮೈತ್ರಿ ಪಕ್ಷಗಳು ತಮ್ಮ ಸೀಟು ಹಂಚಿಕೆಯನ್ನು ಭಾನುವಾರ ಅಂತಿಮಗೊಳಿಸಿವೆ.
ದೆಹಲಿನ BJP ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ, NDA ಮೈತ್ರಿ ಪಕ್ಷಗಳಾದ ಬಿಜೆಪಿ, ಜೆಡಿಯು, ಲೋಕ ಜನಶಕ್ತಿ ಪಕ್ಷ (ರಾಂವಿಲಾಸ್ – LJP R), ರಾಷ್ಟ್ರೀಯ ಲೋಕ ಸಮತಾ ಪಕ್ಷ (RLM) ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ನಡುವೆ ಸೀಟು ಹಂಚಿಕೆ ಪೂರ್ಣಗೊಂಡಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ.
ಅವರ ಪ್ರಕಾರ, BJP ಮತ್ತು JDU ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (LJP R) 29 ಸ್ಥಾನಗಳನ್ನು ಪಡೆದಿದೆ. ಇನ್ನು RLM ಮತ್ತು HAM ತಲಾ ಆರು ಸ್ಥಾನಗಳಲ್ಲಿ ಕಣಕ್ಕಿಳಿಯಲಿವೆ.
ಧರ್ಮೇಂದ್ರ ಪ್ರಧಾನ್ ಅವರು, “ಬಿಹಾರ ಮತ್ತೆ ಎನ್‌ಡಿಎ ಸರ್ಕಾರಕ್ಕಾಗಿ ಸಜ್ಜಾಗಿದೆ,” ಎಂದು ಹೇಳಿ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ಸೂತ್ರವನ್ನು ಘೋಷಿಸಿದ್ದಾರೆ.