Bengaluru: ಸಿಎಂ ಬದಲಾವಣೆಯ ಬಗ್ಗೆ ಈಗಲೂ ಶಾಸಕರ ಅಭಿಪ್ರಾಯ ಕೇಳಬಹುದು. ಆದರೆ ಶಾಸಕರ ಅಭಿಪ್ರಾಯ ಬೇಡ ಎಂದರೆ ಹೈಕಮಾಂಡ್ ತೀರ್ಮಾನಿಸಬಹುದು ಎಂದು ಸಚಿವ ಜಿ. ಪರಮೇಶ್ವರ್ ಹೇಳಿದರು.
ಸದುಷಿನನಗರ ನಿವಾಸದ ಬಳಿ ಮಾತನಾಡಿದ ಅವರು, ಸಿಎಂ ಆಯ್ಕೆ ಹೈಕಮಾಂಡ್ ನಿರ್ಧಾರ ಮತ್ತು ಶಾಸಕರ ಅಭಿಪ್ರಾಯದ ಮೇಲೆ ಅವಲಂಬಿತವಾಗಿದೆ. ಪಕ್ಷ ಗೆದ್ದ ನಂತರ ಸಿಎಂ ಆಯ್ಕೆ ಮಾಡಲಾಗುತ್ತದೆ. ಹೈಕಮಾಂಡ್ ಅಬ್ಸರ್ವರ್ಸ್ ಕಳುಹಿಸಿ, ಶಾಸಕರ ಅಭಿಪ್ರಾಯವನ್ನು ಕೇಳುತ್ತಾರೆ. ಮೊದಲ ಬಾರಿಗೆ ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ದಾಗ ಇದೇ ಕ್ರಮವಿತ್ತು.
ಸಿಎಂ ಆಗಲು ಇಚ್ಛೆ ಇದ್ದೀರಾ ಎಂಬ ಪ್ರಶ್ನೆಗೆ ಅವರು, “ಸಹಜವಾಗಿ ಹೇಳಿದ್ದೆ. ಎಲ್ಲರೂ ಸಿಎಂ ಆಗಬಹುದು. ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತಾರೋ ಅವರಿಗೆ ಜೈ ಹೇಳುತ್ತೇವೆ” ಎಂದು ಉತ್ತರಿಸಿದರು. ಡಿಕೆಶಿ ಮತ್ತು ಸಿದ್ದರಾಮಯ್ಯ ಮೊದಲ ಸಾಲಿನವರು, ನಾವು ಸೆಕೆಂಡ್ ಇದ್ದೇವೆ ಎಂದರು.
ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆ ನಿಷೇಧ ಕುರಿತು ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರಕ್ಕೆ ಅವರು, “ಅದರ ಬಗ್ಗೆ ಸಿಎಂ ಚರ್ಚೆ ಮಾಡಬಹುದು. ಮುಖ್ಯ ಕಾರ್ಯದರ್ಶಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಇಲಾಖೆ ಬಂದರೆ ಪರಿಶೀಲನೆ ಮಾಡುತ್ತೇವೆ” ಎಂದು ಹೇಳಿದರು.
ಎಬಿವಿಪಿ ಕಾರ್ಯಕ್ರಮದಲ್ಲಿ ಮೆರವಣಿಗೆ ನಡೆದ ಬಗ್ಗೆ, “ಅಬ್ಬಕ್ಕನಿಗೆ ಕೈಮುಗಿಸುವುದು ತಪ್ಪೇ? ಇವತ್ತು ಸ್ಪಷ್ಟನೆ ನೀಡುತ್ತಿದ್ದೇನೆ. ನಾವು ಅರ್ಜಿ ಬಂದರೆ ಪರಿಶೀಲಿಸುತ್ತೇವೆ. ಸರ್ಕಾರ ಬ್ಯಾನ್ ಮಾಡಿದ್ರೆ ಕೊಡಲ್ಲ” ಎಂದರು.
ಸಿಎಂ ಆಗಿದ್ದರೆ ಅಭಿವೃದ್ಧಿ ಸ್ಥಗಿತವಾಗುತ್ತದೆ ಎಂಬ ಆರ್.ವಿ. ದೇಶಪಾಂಡೆ ಹೇಳಿಕೆಗೆ, ಅವರು ಪ್ರತಿಕ್ರಿಯಿಸುತ್ತಾ, “ಪ್ರತಿ ಜಿಲ್ಲೆಗೆ ನಾವು ಹೋಗುತ್ತೇವೆ. ಮುಖ್ಯಮಂತ್ರಿಗಳು ಜಿಲ್ಲೆಗಳಿಗೆ ಬರುತ್ತಾರೆ. ಸಾವಿರ ಕೋಟಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕುತ್ತಾರೆ. ಇದರಿಂದ ಅಭಿವೃದ್ಧಿ ಕುಂಠಿತವಾಗುವುದಿಲ್ಲ. ಗ್ಯಾರೆಂಟಿಗಳಿಗೆ ಅನುದಾನ ಇದೆ” ಎಂದರು.