back to top
23.7 C
Bengaluru
Tuesday, November 25, 2025
HomeKarnatakaLalbagh ರಕ್ಷಿಸಲು ಕೇಂದ್ರಕ್ಕೆ ಮನವಿ ಮಾಡಿದ Tejaswi Surya

Lalbagh ರಕ್ಷಿಸಲು ಕೇಂದ್ರಕ್ಕೆ ಮನವಿ ಮಾಡಿದ Tejaswi Surya

- Advertisement -
- Advertisement -

Bengaluru: ಲಾಲ್‌ಬಾಗ್ (Lalbagh) ಪ್ರದೇಶದಲ್ಲಿ ಸುರಂಗ ರಸ್ತೆ ನಿರ್ಮಾಣದ ಕುರಿತ ವಿವಾದ ದಿನೇ ದಿನೇ ಗಂಭೀರವಾಗುತ್ತಿದೆ. ಈ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejaswi Surya) ಅವರು ಕೇಂದ್ರ ಗಣಿ ಸಚಿವ ಕಿಶನ್ ರೆಡ್ಡಿಗೆ ಪತ್ರ ಬರೆದು ತಮ್ಮ ಆಕ್ರೋಶ ಮತ್ತು ಚಿಂತೆ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಲಾಲ್‌ಬಾಗ್ ಜಾಗವನ್ನು ಸುರಂಗ ರಸ್ತೆಯ ಸಾಮಗ್ರಿಗಳನ್ನು ಶೇಖರಿಸಲು ಮಾತ್ರ ಬಳಸಲಾಗುತ್ತದೆ, ಕಾಮಗಾರಿ ಮುಗಿದ ನಂತರ ಜಾಗವನ್ನು ಖಾಲಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಆದರೆ ಸುರಂಗ ಮಾರ್ಗ ಲಾಲ್‌ಬಾಗ್ ನ ಕೆಳಭಾಗದಿಂದ ಹಾದುಹೋಗಲಿದೆ ಎಂಬ ವಿಷಯದಿಂದ ವಿವಾದ ಉಂಟಾಗಿದೆ.

ತೇಜಸ್ವಿ ಸೂರ್ಯ ಅವರು ತಮ್ಮ ಪತ್ರದಲ್ಲಿ, ಲಾಲ್‌ಬಾಗ್ ಬಂಡೆಯ ರಚನೆಯ ಮೇಲೆ ಸುರಂಗ ಮಾರ್ಗದ ದೀರ್ಘಕಾಲೀನ ಪರಿಣಾಮಗಳನ್ನು ಅಧ್ಯಯನ ಮಾಡಲು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯಿಂದ (GSI) ಸಂಪೂರ್ಣ ಭೂವೈಜ್ಞಾನಿಕ ಮೌಲ್ಯಮಾಪನ ನಡೆಸುವಂತೆ ಕಿಶನ್ ರೆಡ್ಡಿಗೆ ಮನವಿ ಮಾಡಿದ್ದಾರೆ.

” ಲಾಲ್‌ಬಾಗ್ ಯಾವುದೇ ಭಾಗವನ್ನು ಅಭಿವೃದ್ಧಿ ಕಾರ್ಯಕ್ಕಾಗಿ ಬಳಸುವ ಮೊದಲು ಸಂಪೂರ್ಣ ಅಧ್ಯಯನ ಅಗತ್ಯ. ಖಾಸಗಿ ವಾಹನಗಳಿಗೆ ಸುರಂಗ ಮಾರ್ಗ ಬದಲಿಗೆ, ಜನಸಾಮಾನ್ಯರಿಗೆ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬೇಕು,” ಎಂದು ತೇಜಸ್ವಿ ಸೂರ್ಯ ಅವರು ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸುರಂಗ ಮಾರ್ಗ ಲಾಲ್‌ಬಾಗ್ ಮೂಲಕ ಹಾದುಹೋಗುವುದರಿಂದ, ಇದು ಬೆಂಗಳೂರಿನ ಪ್ರಮುಖ ಪರಿಸರ ಮತ್ತು ಪರಂಪರೆಯ ತಾಣಗಳಿಗೆ ಅಪಾಯವಾಗಬಹುದು. ಸುಮಾರು 3,000 ದಶಲಕ್ಷ ವರ್ಷಗಳ ಹಿಂದಿನ ಪೆನಿನ್ಸುಲರ್ ಗ್ನೀಸ್ ಶಿಲಾರಚನೆ — ಅಂದರೆ ಲಾಲ್ಬಾಗ್ ಬಂಡೆಯ ಪಕ್ಕದಲ್ಲೇ ಈ ಯೋಜನೆ ಕೈಗೊಳ್ಳಲಾಗುತ್ತಿದೆ ಎಂಬುದು ಅವರ ಎಚ್ಚರಿಕೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page