America: “ಪ್ರಧಾನಿ ಮೋದಿ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ನನಗೆ ಭರವಸೆ ನೀಡಿದ್ದಾರೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಷ್ಯಾ ಮೇಲೆ ಜಾಗತಿಕ ಒತ್ತಡ ಹೆಚ್ಚಿಸಲು ಇದು ದೊಡ್ಡ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟರು.
ವಾಷಿಂಗ್ಟನ್‌ನ ಓವಲ್ ಕಚೇರಿಯಲ್ಲಿ FBI ನಿರ್ದೇಶಕ ಕಾಶ್ ಪಟೇಲ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಟ್ರಂಪ್, ಸರ್ಕಾರದ ಅಪರಾಧ ನಿಗ್ರಹ ಕ್ರಮಗಳ ಕುರಿತು ಮಾತನಾಡಿದರು.
ಭಾರತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ಟ್ರಂಪ್ನನ್ನು ಪ್ರೀತಿಸುತ್ತಾರೆ,” ಎಂದು ಮೂರನೇ ವ್ಯಕ್ತಿಯಲ್ಲಿ ಉಲ್ಲೇಖಿಸಿದರು. “ನಾನು ಅವರ ರಾಜಕೀಯ ಜೀವನಕ್ಕೆ ಹಾನಿ ಮಾಡಬಯಸುವುದಿಲ್ಲ” ಎಂದೂ ಹೇಳಿದರು.
“ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದು ನನಗೆ ಅಸಮಾಧಾನವಾಗಿತ್ತು. ಆದರೆ ಮೋದಿ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ಇದು ತಕ್ಷಣ ಸಾಧ್ಯವಿಲ್ಲ, ಆದರೆ ಶೀಘ್ರದಲ್ಲೇ ಪ್ರಕ್ರಿಯೆ ಮುಗಿಯುತ್ತದೆ,” ಎಂದು ಟ್ರಂಪ್ ಸ್ಪಷ್ಟಪಡಿಸಿದರು.







