back to top
20.4 C
Bengaluru
Sunday, December 14, 2025
HomeKarnatakaChikkaballapuraಬೀದಿ ನಾಯಿಗಳ ಸ್ಥಳಾಂತರಕ್ಕೆ ದರಪಟ್ಟಿ ಆಹ್ವಾನ; ದತ್ತು ಪಡೆಯಲು ಅವಕಾಶ

ಬೀದಿ ನಾಯಿಗಳ ಸ್ಥಳಾಂತರಕ್ಕೆ ದರಪಟ್ಟಿ ಆಹ್ವಾನ; ದತ್ತು ಪಡೆಯಲು ಅವಕಾಶ

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿರುವ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳ ಆವರಣದಲ್ಲಿ ವಾಸವಾಗಿರುವ ಬೀದಿ ನಾಯಿಗಳನ್ನು ಹಿಡಿದು, ನಗರಸಭೆಯಿಂದ ನಿರ್ಮಿಸಲಾಗಿರುವ ಆಶ್ರಯ ತಾಣಗಳಿಗೆ (Shelters) ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಈ ಕಾರ್ಯವನ್ನು ನಿರ್ವಹಿಸಲು ಇಚ್ಛೆಯುಳ್ಳ ವ್ಯಕ್ತಿಗಳು ಅಥವಾ ಸಂಘ-ಸಂಸ್ಥೆಗಳಿಂದ ಡಿಸೆಂಬರ್ 12 ರ ಒಳಗಾಗಿ ದರಪಟ್ಟಿಯನ್ನು ಸಲ್ಲಿಸುವಂತೆ ಚಿಕ್ಕಬಳ್ಳಾಪುರ ನಗರಸಭೆಯ ಪೌರಾಯುಕ್ತರು ಕೋರಿದ್ದಾರೆ.

ಈ ಕಾರ್ಯದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ನಗರಸಭೆಯನ್ನು ಸಂಪರ್ಕಿಸಬಹುದು.

ದತ್ತು ಸ್ವೀಕಾರ ಮತ್ತು ಸಹಾಯವಾಣಿ:

ನಗರಸಭೆಯು ಬೀದಿ ನಾಯಿಗಳನ್ನು ದತ್ತು ನೀಡಲು ಮತ್ತು ಪಡೆಯಲು ಇಚ್ಛೆಯುಳ್ಳ ಸಾರ್ವಜನಿಕರು ಅಥವಾ ಸಂಘ-ಸಂಸ್ಥೆಗಳಿಗಾಗಿ ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ದತ್ತು ಪಡೆಯಲು ಆಸಕ್ತಿ ಇರುವವರು ನಗರಸಭೆಯನ್ನು ಸಂಪರ್ಕಿಸಬಹುದು.

ಬೀದಿ ನಾಯಿಗಳ ನಿರ್ವಹಣೆ ಹಾಗೂ ಸಂಬಂಧಿಸಿದ ಯಾವುದೇ ದೂರುಗಳು, ಸಮಸ್ಯೆಗಳು ಅಥವಾ ನಿಯಮ ಉಲ್ಲಂಘನೆಗಳ ಕುರಿತು ಮಾಹಿತಿ ನೀಡಲು ನಗರಸಭೆಯು ಸಹಾಯವಾಣಿಯನ್ನು ಸ್ಥಾಪಿಸಿದೆ. ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 08156-275557 ಗೆ ಕರೆ ಮಾಡಿ ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

The post ಬೀದಿ ನಾಯಿಗಳ ಸ್ಥಳಾಂತರಕ್ಕೆ ದರಪಟ್ಟಿ ಆಹ್ವಾನ; ದತ್ತು ಪಡೆಯಲು ಅವಕಾಶ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page