Bhalki, Bidar : ಎಳ್ಳ ಅಮಾವಾಸ್ಯೆ (Ellamavasye) ಹಬ್ಬ ಸಂಭ್ರಮ ಭಾಲ್ಕಿ ತಾಲ್ಲೂಕಿನಲ್ಲಿ ಮನೆ ಮಾಡಿತ್ತು. ಜಿಲ್ಲಾಧಿಕಾರಿ (Deputy Commissioner) ರಾಮಚಂದ್ರನ್ ಆರ್ ಮತ್ತು ಎಸ್‌ಪಿ ನಾಗೇಶ್ ಡಿ.ಎಲ್ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಅವರ ಹೊಲಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಭಜ್ಜಿ, ರೊಟ್ಟಿ ಸವಿದು ಸಂಭ್ರಮ ಪಟ್ಟರು. ಕೆಲಕಾಲ ಅಲ್ಲಿಯೇ ಸಮಯ ಕಳೆದು ಎಲ್ಲ ರೈತರೊಂದಿಗೆ ಸೇರಿ ಹಬ್ಬದ ಮಹತ್ವ ತಿಳಿದುಕೊಂಡು ಖುಷಿಪಟ್ಟರು. ಇದೇ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಿದ್ರಾಮಪ್ಪ ಆಣದೂರೆ ಸನ್ಮಾನಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಾಬುರಾವ್ ಜೋಳದಾಪಕೆ, ಪ್ರಮುಖರಾದ ಸಿದ್ರಾಮಪ್ಪ ವಂಕೆ, ದತ್ತಾ ತಿಮ್ಮಾಜಿ, ಸಂಗಮೇಶ ಆಣದೂರೆ, ಅನಿಲ್ ಕುಮಾರ್ ಆಣದೂರೆ, ಪ್ರದೀಪ ಘಂಟೆ ಮತ್ತಿತರರು ಉಪಸ್ಥಿತರಿದ್ದರು.