New Delhi : ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು (July 11) ಬೆಳಗ್ಗೆ ನೂತನ ಸಂಸತ್ ಭವನದ ಛಾವಣಿಯ ಮೇಲೆ ಕಂಚಿನಿಂದ ತಯಾರಿಸಲ್ಪಟ್ಟ ಒಟ್ಟು 9500 ಕೆಜಿ ತೂಕ ಮತ್ತು 6.5 ಮೀ ಎತ್ತರವಿರುವ ರಾಷ್ಟ್ರೀಯ ಲಾಂಛನ (National Emblem) ಅಶೋಕ ಚಿಹ್ನೆಯನ್ನು ಅನಾವರಣಗೊಳಿಸಿದರು.
ಹೊಸ ಪಾರ್ಲಿಮೆಂಟ್ ಕಟ್ಟಡದ (New Parliament Building) ಸೆಂಟ್ರಲ್ ಫೋಯರ್ ಮೇಲ್ಭಾಗದಲ್ಲಿ ನಾಲ್ಕು ದಿಕ್ಕುಗಳಲ್ಲಿ ಮುಖ ಮಾಡಿ ನಿಂತಿರುವ ನಾಲ್ಕು ಸಿಂಹಗಳ ರಾಷ್ಟ್ರೀಯ ಲಾಂಛನವನ್ನು ಸ್ಥಾಪಿಸಲಾಗಿದ್ದು ರಾಷ್ಟ್ರೀಯ ಲಾಂಛನಕ್ಕೆ 6500 ಕೆ.ಜಿ ತೂಕದ ಉಕ್ಕಿನ ರಕ್ಷಣಾ ಕವಚವನ್ನು ನಿರ್ಮಿಸಲಾಗಿದೆ. ಲಾಂಛನವನ್ನು ಅನಾವರಣಗೊಳಿಸಿದ ನಂತರ ನರೇಂದ್ರ ಮೋದಿ ನೂತನ ಸಂಸತ್ತಿನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳೊಂದಿಗೆ ಸಂವಾದ ನಡೆಸಿದರು.
60000 ಚದರ ಮೀಟರ್ ವಿಸ್ತೀರ್ಣದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗುತ್ತಿದ್ದು ಮಾಸ್ಟರ್ ಪ್ಲಾನ್ ಪ್ರಕಾರ, ಈಗಿರುವ ವೃತ್ತಾಕಾರದ ಸಂಸತ್ ಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯ ಹಿಂದೆ ಈ ಹೊಸ ತ್ರಿಕೋನ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ.