back to top
20.2 C
Bengaluru
Saturday, August 30, 2025
HomeWorldJapanಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಮುದ್ರಕ್ಕೆ ಹಾರಿಸಿದ North Korea

ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಮುದ್ರಕ್ಕೆ ಹಾರಿಸಿದ North Korea

- Advertisement -
- Advertisement -

Seoul, South Korea: ಉತ್ತರ ಕೊರಿಯಾ (North Korea) ಬುಧವಾರ ಸಮುದ್ರಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ (Ballistic Missile) ಹೋಲುವ ಕ್ಷಿಪಣಿಯೊಂದನ್ನು ಉಡಾಯಿಸಿದ್ದು (Firing), ಇದು ಹೊಸ ವರ್ಷದಲ್ಲಿ ಪ್ಯೊಂಗ್ಯಾಂಗ್‌ನ (Pyongyang) ಮೊದಲ ಉಡಾವಣೆಯಾಗಿದೆ ಎಂದು ದಕ್ಷಿಣ ಕೊರಿಯಾ (South Korea) ಮತ್ತು ಜಪಾನ್ (Japan) ತಿಳಿಸಿವೆ.

ಕರೋನವೈರಸ್ (Coronavirus Covid-19) ಸಾಂಕ್ರಾಮಿಕ ತೀವ್ರ ಆರ್ಥಿಕ ಸಂಕಷ್ಟದ ಹೊರತಾಗಿಯೂ ಎತೇಚ್ಚ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಮಾಡಿರುವ ಉತ್ತರ ಕೊರಿಯಾದ 2022 ರ ಮೊದಲ ಸಶಸ್ತ್ರ ಉಡಾವಣೆ ಇದಾಗಿದ್ದು, ಕಿಮ್ ಜಾಂಗ್ ಉನ್ (Kim Jong-un) ಅಧಿಕಾರ ವಹಿಸಿಕೊಂಡ ನಂತರದ ದಶಕದಲ್ಲಿ, ಉತ್ತರ ಕೊರಿಯಾ ತನ್ನ ಮಿಲಿಟರಿ ತಂತ್ರಜ್ಞಾನದ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡಿದೆ.

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ (Fumio Kishida) ಇದನ್ನು “ಸಂಭಾವ್ಯ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ” ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ವರ್ಷದಿಂದ ಉತ್ತರ ಕೊರಿಯಾ ನಿರಂತರವಾಗಿ ಕ್ಷಿಪಣಿಗಳನ್ನು ಉಡಾಯಿಸುತ್ತಿರುವುದು ನಿಜಕ್ಕೂ ವಿಷಾದನೀಯ, ಜಪಾನ್ ಸರ್ಕಾರ ಎಷ್ಟು ಕ್ಷಿಪಣಿಗಳನ್ನು ಉಡಾವಣೆ ಮಾಡಿರಬಹುದು ಎಂಬ ವಿವರಗಳನ್ನು ವಿಶ್ಲೇಷಿಸುತ್ತಿದೆ” ಎಂದು ತಿಳಿಸಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page