London, United Kingdom : England ವಿರುದ್ಧ ನಡೆಯುತ್ತಿರುವ ಏಕದಿನ (ODI) India England first ODI ಸರಣಿಯಲ್ಲಿ Team India 10 ವಿಕೆಟ್ ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ. ಮೊದಲು ಟಾಸ್ (Toss) ಗೆದ್ದ ಭಾರತ ನಾಯಕ ರೋಹಿತ್ ಶರ್ಮ (Rohit Sharma) ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ (Batting) ಗೆ ಆಹ್ವನಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಗೆ Jasprit Bumrah ತಮ್ಮ ಮೊದಲನೇ Over ನಲ್ಲಿ Jason Roy ಮತ್ತು Joe Root ರ Wicket ಶೂನ್ಯಕ್ಕೆ ಪಡೆಯುವ ಮೂಲಕ ಆಘಾತ ನೀಡಿದರು. ಭಾರತದ ಮಾರಕ ಬೌಲಿಂಗ್ ದಾಳಿಗೆ ಆಂಗ್ಲರ ಪಡೆ ತತ್ತರಿಸಿತು ಆದರೆ ಇಂಗ್ಲೆಂಡ್ ನಾಯಕ Jos Buttler (30) ಕೊಂಚ ಪ್ರತಿರೋಧ ತೋರಿಸಿದರು ಪ್ರಯೋಜನೆಗೊಂಡಿಲ್ಲ. ಒಂದು ಹಂತದಲ್ಲಿ ಇಂಗ್ಲೆಂಡ್ 68 ಕ್ಕೆ 8 ವಿಕೆಟ್ ಕಳೆದು ಕೊಂಡಿತ್ತು ಆಗ ಜೊತೆಯಾದ David Willey ಮತ್ತು Brydon Carse ಸಮಯೋಜಿತ ಆಟವಾಡಿ ತಂಡದ ಮೊತ್ತ 100 ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಇಂಗ್ಲೆಂಡ್ 25.2 ಓವರ್ಗಳಲ್ಲಿ 110 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಭಾರತದ ಪರ Jasprit Bumrah 6 ವಿಕೆಟ್, Mohammed Shami 3 ಮತ್ತು Prasidh Krishna 1 ವಿಕೆಟ್ ಪಡೆದು ಮಿಂಚಿದರು.
111 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ನಾಯಕ Rohit Sharma ಮತ್ತು Shikhar Dhawan ಭಾರತ ಯಾವುದೇ Wicket ಕಳೆದುಕೊಳ್ಳದೆ ಜಯ ಸಾಧಿಸುವಂತೆ ನೋಡಿಕೊಂಡರು. ಅಂತಿಮವಾಗಿ ಭಾರತ 18.4 ಓವರ್ ಗಳಲ್ಲಿ 114 ಗಳಿಸಿ 3 ಪಂದ್ಯಗಳ ಸರಣಿಯಲ್ಲಿ1-0 ಅಂತರ ಕಾಯ್ದುಕೊಂಡಿತ್ತು.
ಮಾರಕ Bowling ನಡೆಸಿದ Jasprit Bumrah ಪಂದ್ಯ ಪುರುಷೋತ್ತಮ (Man Of The Match) ಪ್ರಶಸ್ತಿಗೆ ಭಾಜನರಾದರು.
Image: Indian Cricket Team