Doddaballapura, Bengaluru Rural : ದೊಡ್ಡಬಳ್ಳಾಪುರ ನಗರದ ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವಾಲಯದಲ್ಲಿ (Mariyamma temple) ಲೋಕ ಕಲ್ಯಾಣಾರ್ಥವಾಗಿ ಮಂಗಳವಾರ ನಡೆದ ಚಂಡಿ ಮಹಾಪೂಜಾ (Chandi Pooja) ಮಹಾಹೋಮ (Chandi Homam) ಕಾರ್ಯಕ್ರಮದಲ್ಲಿ ಬ್ರಹ್ಮರ್ಷಿ ಆನಂದಸಿದ್ಧ ಪೀಠದ ಆನಂದ ಗುರೂಜಿ (Anand Guruji) ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು.
“ಸನಾತನ ಹಿಂದೂ ಧರ್ಮದಲ್ಲಿ ಅಂತರ್ಗತವಾಗಿರುವ ದೈವಿಕ ಶಕ್ತಿ ಹಿಂದೂ ಸಮಾಜವನ್ನು ರಕ್ಷಿಸುತ್ತಿದೆ. ಯಾವ ಕುಟುಂಬದಲ್ಲಿ ಮಹಿಳೆಯನ್ನು ಗೌರವಿಸುವ ಮನೆಯಲ್ಲಿ ಸುಖ,ಶಾಂತಿ,ಸಮೃದ್ಧಿ ನೆಲೆಸಿರುತ್ತದೆ. ದೇವಿಯ ಕೃಪೆಯಿಂದ ಕೋರೊನಾದಂತಹ ಸಂಕಷ್ಟಗಳು ದೂರವಾಗಲಿದೆ ” ಎಂದು ಗುರೂಜಿ ತಿಳಿಸಿದರು.
ಊರಿನ ಶಾಂತಿ ಹಾಗೂ ಜನರ ಸಮಸ್ಯೆಗಳ ನಿವಾರಣೆಯಾಗಬೇಕು ಮತ್ತು ನಮ್ಮನ್ನು ಕಾಡುತ್ತಿರುವ ಕೊರೊನಾದಂತಹ ಕಾಯಿಲೆಗಳು ಶಾಶ್ವತವಾಗಿ ದೂರವಾಗಬೇಕು ಎಂಬ ಉದ್ದೇಶದಿಂದ ಇಂದು ಚಂಡಿಮಹಾಪೂಜಾ ಮಹಾ ಹೋಮ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಭಕ್ತಾದಿಗಳಿಗೆ ದೇವಿಯ ಕೃಪೆ ದೊರೆಯಲಿ ಎಂದು ನಿವೃತ್ತ ಎ.ಸಿ.ಪಿ ಹಾಗೂ ಚಂಡಿ ಮಹಾಹೋಮದ ಆಯೋಜಕ ಎಚ್.ಸುಬಣ್ಣ ಹೇಳಿದರು.
ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಮಠದ ಸದ್ಗುರು ಬಾಲಯೋಗಿ ಸಾಯಿಮಂಜನಾಥ ಪ್ರಣವಾನಂದಪುರಿ ಸ್ವಾಮೀಜಿ, ವಹ್ನಿಕುಲ ಕ್ಷತ್ರಿಯ ಯಜಮಾನರಾದ ಎಸ್.ರಂಗಸ್ವಾಮಿ, ಜಿ.ರಾಜಣ್ಣ, ಈಶ್ವರಪ್ಪ, ಪಿಳ್ಳಣ್ಣ,ವೈ.ನಾಗರಾಜು, ಭೀಮಣ್ಣ, ನಗರಸಭೆ ಸದಸ್ಯ ಜಿ.ನಾಗರಾಜು, ಪ್ರಭಾನಾಗರಾಜು, ಚಿಕ್ಕಪೇಟೆ ಮಂಜಣ್ಣ, ರಾಮಣ್ಣ, ನರೇಂದ್ರ, ಜಯಕುಮಾರ್, ಆರ್.ರವಿಕುಮಾರ್, ಎಂ.ಮಂಜುನಾಥ್, ಸುಬ್ರಮಣಿ, ಎಂ.ನಾಗರಾಜು ಹಾಗೂ ಭಕ್ತಾದಿಗಳು ಮತ್ತಿತರರು ಉಪಸ್ಥಿತರಿದ್ದರು.